ಬೆಳ್ಳಿ ತೆರೆ ಮೇಲೆ ಅಳಿಯ-ಮಾವನ ಅಬ್ಬರ: ಒಂದೇ ದಿನ “ರಿಪ್ಪನ್ ಸ್ವಾಮಿ” Vs “ಅಂದೊಂದಿತ್ತು ಕಾಲ” ಸಿನಿಮಾ ರಿಲೀಸ್


ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಬೆಳ್ಳಿ ತೆರೆ ಕೂಡ ಸಜ್ಜಾಗಿದೆ. ಈ ಬಾರಿ ಕನ್ನಡದಲ್ಲಿ ಒಟ್ಟಾರೆ ಐದು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅದರಲ್ಲಿ ಒಂದು ವಿಶೇಷವೆಂದರೆ ಅಳಿಯ-ಮಾವ ಮುಖಾಮುಖಿ. ಹೌದು, ವಿಜಯ್ ರಾಘವೇಂದ್ರ ಅಭಿನಯದ ರಿಪ್ಪನ್ ಸ್ವಾಮಿ ಮತ್ತು ವಿನಯ್ ರಾಜ್‌ಕುಮಾರ್ ಅಭಿನಯದ ಅಂದೊಂದಿತ್ತು ಕಾಲ ಒಂದೇ ದಿನ, ಆಗಸ್ಟ್ 29ರಂದು ಬಿಡುಗಡೆಯಾಗುತ್ತಿವೆ.
ರಿಪ್ಪನ್ ಸ್ವಾಮಿ ಚಿತ್ರದ ನಿರೀಕ್ಷೆ ಹೆಚ್ಚುತ್ತಿದೆ, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈ ಬಾರಿ ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಗಡ್ ಲುಕ್‌ನಲ್ಲಿ ನಟಿಸಿರುವ ಈ ಚಿತ್ರವನ್ನು ಕಿಶೋರ್ ಮೂಡುಬಿದಿರೆ ನಿರ್ದೇಶಿಸಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಆಗಿ ಮೂಡಿಬಂದಿರುವ ಈ ಸಿನಿಮಾದ ಟ್ರೈಲರ್ ಕುತೂಹಲ ಹೆಚ್ಚಿಸಿದೆ. ಪ್ರೀಮಿಯರ್ ಶೋಗಳಲ್ಲಿ ಚಿತ್ರದ ಬಗ್ಗೆ ಪಾಸಿಟಿವ್ ಓಪಿನಿಯನ್ ಮೂಡಿದೆ. ವಿಜಯ್ ರಾಘವೇಂದ್ರಗೆ ಅಶ್ವಿನಿ ಚಂದ್ರಶೇಖರ್ ಜೋಡಿ, ಸ್ಯಾಮ್ಯುಯೆಲ್ ಸಂಗೀತ ಹಾಗೂ ರಂಗನಾಥ್ ಸಿ.ಎಂ. ಅವರ ಕ್ಯಾಮರಾವರ್ಕ್ ಚಿತ್ರದ ಹೈಲೈಟ್.
ಅಂದೊಂದಿತ್ತು ಕಾಲ – ಬಾಲ್ಯದ ಕನಸುಗಳ ಹೃದಯಸ್ಪರ್ಶಿ ಕತೆ, ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ನಟನೆಯ ಈ ಚಿತ್ರವನ್ನು ಕೀರ್ತಿ ಕೃಷ್ಣಪ್ಪ ನಿರ್ದೇಶಿಸಿದ್ದು, ಹೃದಯ ಸ್ಪರ್ಶಿಸುವ ಕಥೆಯ ನಿರೂಪಣೆ ಹೊಂದಿದೆ. ಬಾಲ್ಯದ ಕನಸುಗಳು, ಜೀವನದ ಪಾಠಗಳು ಹಾಗೂ ಭಾವನಾತ್ಮಕ ಕಥಾಹಂದರ ಚಿತ್ರದ ವೈಶಿಷ್ಟ್ಯ. ಪ್ರೇಮ್ ನಿರ್ಮಿಸಿದ ಈ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ವಿಶೇಷವಾಗಿ ಸಿದ್ ಶ್ರೀರಾಮ್ ಹಾಡಿರುವ ಮುಂಗಾರು ಮಳೆಯಲಿ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಸಂಗೀತ: ರಾಘವೇಂದ್ರ ವಿ., ಛಾಯಾಗ್ರಹಣ: ಅಭಿಷೇಕ್ ಕಾಸರಗೋಡು.
ಇನ್ನುಳಿದಂತೆ ಇನ್ನೂ ಮೂರು ಸಿನಿಮಾಗಳೂ ರಿಲೀಸ್, ಈ ಎರಡು ಸಿನಿಮಾಗಳ ಜೊತೆಗೆ ಇನ್ನೂ ಉಸಿರೇ, ಮುರುಗ, ಗೌರಿಶಂಕರ ಚಿತ್ರಗಳು ಕೂಡ ತೆರೆ ಕಾಣುತ್ತಿವೆ. ಹೀಗಾಗಿ ಈ ಹಬ್ಬದ ವಾರಾಂತ್ಯದಲ್ಲಿ ಕನ್ನಡ ಪ್ರೇಕ್ಷಕರಿಗೆ ಬೆಳ್ಳಿ ತೆರೆ ಮೇಲೆ ಪರಿಪೂರ್ಣ ಪ್ಯಾಕೇಜ್ ಸಿಗಲಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
