Back to Top

'ಲವ್ ಮಾಕ್ಟೇಲ್' 3 ಬರೋದು ಕನ್‌ಫರ್ಮ್‌; ಪುಟ್ಟ ನಟಿಯ ಹುಡುಕಾಟದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ

SSTV Profile Logo SStv June 24, 2025
'ಲವ್ ಮಾಕ್ಟೇಲ್' 3 ಬರೋದು ಕನ್‌ಫರ್ಮ್‌
'ಲವ್ ಮಾಕ್ಟೇಲ್' 3 ಬರೋದು ಕನ್‌ಫರ್ಮ್‌

ಕನ್ನಡ ಚಿತ್ರರಂಗದ ಬಹುಜನಪ್ರಿಯ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ತಮ್ಮ ಹಿಟ್ ಸಿನಿಮಾ ಸರಣಿಯ ಮೂರನೇ ಭಾಗವಾದ ಲವ್ ಮಾಕ್ಟೇಲ್ 3 ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲು ಸಜ್ಜಾಗಿದ್ದಾರೆ. ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ 2 ಸಿನಿಮಾಗಳಂತಹ ಭಾವನಾತ್ಮಕ ಕತೆಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಈ ಜೋಡಿ, ಮೂರನೇ ಭಾಗಕ್ಕೂ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.

ಇದೀಗ ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿಯೇ ಒಂದು ಪುಟ್ಟ ಹುಡುಗಿಯ ಆಡಿಷನ್ ಪ್ರಕ್ರಿಯೆ ಆರಂಭವಾಗಿದ್ದು, ಮಿಲನ ನಾಗರಾಜ್ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ. ವಯಸ್ಸು 5 ರಿಂದ 8ರ ನಡುವೆ ಇರಬೇಕು, ಎಕ್ಸ್‌ಪ್ರೆಸಿವ್ ಫೇಸ್, ಉತ್ತಮ ಎನರ್ಜಿ ಹಾಗೂ ಅಭಿನಯದ ಆಸಕ್ತಿ ಇರುವ ಹುಡುಗಿಯರು ವಿಡಿಯೋ ಮಾಡಿ “darlingkrishnaofficial@gmail.com” ಗೆ ಕಳುಹಿಸಬಹುದು ಎಂದು ತಿಳಿಸಲಾಗಿದೆ.

ಡಾರ್ಲಿಂಗ್ ಕೃಷ್ಣ ಹೇಳುವಂತೆ, ಈ ಕಥೆಯು 2ನೇ ಭಾಗದ ಮುಂದುವರಿಕೆಯಾಗಿ ಇರಲಿದ್ದು, ಹೊಸ ಪಾತ್ರಗಳೊಂದಿಗೆ ಒಂದು ಸಾಂತವ ಭಾಷೆಯ ಭಾವನಾತ್ಮಕ ಕಥಾಹಂದರ ಹೊಂದಿರಲಿದೆ. ಮಿಲನಾ ಈ ಚಿತ್ರದಲ್ಲಿರುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡದೆ ಕುತೂಹಲದ ಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ.