ಕಿಚ್ಚನ 52ನೇ ಹುಟ್ಟುಹಬ್ಬಕ್ಕೆ ಸ್ಥಳ-ಟೈಮಿಂಗ್ ಫಿಕ್ಸ್ – ಅಭಿಮಾನಿಗಳಲ್ಲಿ ಖುಷಿಯ ಸಂಭ್ರಮ


ಕನ್ನಡ ಚಲನಚಿತ್ರ ಲೋಕದ ಅಗ್ರ ನಟರಲ್ಲಿ ಒಬ್ಬರಾಗಿರುವ ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಪ್ರತಿವರ್ಷ ಜಯನಗರದ ಮೈದಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುವ ಪದ್ಧತಿ ಇದ್ದರೂ, ಈ ಬಾರಿ ಸಂಭ್ರಮದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ. ಸುದೀಪ್ ಅವರ ಹುಟ್ಟುಹಬ್ಬವನ್ನು ಈ ಬಾರಿ ಬೆಂಗಳೂರು ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1ರ ರಾತ್ರಿ 9 ಗಂಟೆಯಿಂದ 12 ಗಂಟೆಯವರೆಗೆ ಈ ಸಂಭ್ರಮ ನಡೆಯಲಿದೆ. ಅಂದರೆ, ಈ ವರ್ಷ ಹುಟ್ಟುಹಬ್ಬದ ಸಂಭ್ರಮವನ್ನು ಸೆಪ್ಟೆಂಬರ್ 2ರ ಬೆಳಿಗ್ಗೆಗೆ ಕಾಯದೆ, ಮುಂಚಿತವಾಗಿಯೇ ಆರಂಭಿಸಲಾಗುತ್ತಿದೆ.
ತಮ್ಮ ತಾಯಿ ಸರೋಜಮ್ಮ ಅಗಲಿಕೆ ನೋವು ಇನ್ನೂ ಹೊಸದಾಗಿರುವ ಕಾರಣ, ಈ ಬಾರಿ ತಮ್ಮ ಮನೆ ಬಳಿ ಯಾರೂ ಬಂದು ಜನರ ಶಾಂತಿ ಭಂಗ ಮಾಡಬಾರದು ಎಂದು ಸುದೀಪ್ ಮನವಿ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಗೌರವಿಸುವುದರ ಜೊತೆಗೆ, ತಮ್ಮ ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳು ಸುದೀಪ್ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಸ್ಥಳ ಮತ್ತು ಸಮಯ ಬದಲಾದರೂ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ಈಗಾಗಲೇ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬದ ಸಿದ್ಧತೆಗಳು ನಡೆಯುತ್ತಿದ್ದು, ಅಭಿಮಾನಿಗಳು ಕಿಚ್ಚನನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.
ಸುದೀಪ್ ಅಭಿಮಾನಿಗಳನ್ನು ನಿರಾಸೆಗೊಳಿಸಬಾರದು ಎಂಬ ಕಾರಣಕ್ಕೆ ಈ ಬಾರಿ ವಿಶೇಷ ರೀತಿಯಲ್ಲಿ ಸಂಭ್ರಮಿಸಲು ತೀರ್ಮಾನಿಸಿದ್ದಾರೆ. ತಾಯಿ ಅಗಲಿಕೆಯ ನೋವಿದ್ದರೂ, ಅಭಿಮಾನಿಗಳ ಸಂತೋಷಕ್ಕಾಗಿ ಹುಟ್ಟುಹಬ್ಬದ ಕಾರ್ಯಕ್ರಮವನ್ನು ನಡೆಸಿಕೊಡುವುದು ಅವರ ಅಭಿಮಾನಿಗಳ ಮೇಲಿನ ನಿಸ್ಸೀಮ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತದೆ.
ಈ ಬಾರಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮ ಸ್ವಲ್ಪ ವಿಭಿನ್ನವಾಗಿದ್ದರೂ, ಅಭಿಮಾನಿಗಳ ಉತ್ಸಾಹ, ಪ್ರೀತಿ ಮತ್ತು ಬೆಂಬಲ ಎಂದಿನಂತೆ ಅದ್ಭುತವಾಗಿಯೇ ಇರುವುದು ಖಚಿತ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
