ಖ್ಯಾತ ನಿರೂಪಕಿ ಅನುಶ್ರೀ ಮದುವೆ ಮುಹೂರ್ತ ಫಿಕ್ಸ್ – ಆ.28ರಂದು ಹಸೆಮಣೆ ಏರಲು ಸಿದ್ಧ!


ಕನ್ನಡದ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆ.28ರಂದು ಬೆಂಗಳೂರಿನ ಹೊರವಲಯದ ಒಂದು ರೆಸಾರ್ಟ್ನಲ್ಲಿ ಈ ವಿಶೇಷ ಮದುವೆಯ ಸಮಾರಂಭ ನಡೆಯಲಿದೆ.
ಕೊಡಗಿನ ರೋಷನ್ ಅವರನ್ನು ಅನುಶ್ರೀ ವಿವಾಹವಾಗುತ್ತಿದ್ದಾರೆ. ಆ.28ರಂದು ಬೆಳಗ್ಗೆ 10:56 ಕ್ಕೆ ಶುಭ ಮುಹೂರ್ತ ನಿಗದಿಯಾಗಿದ್ದು, ಆ ಸಮಯದಲ್ಲಿ ಹಸೆಮಣೆ ಏರಲಿದ್ದಾರೆ.
ಮದುವೆಯ ಆಮಂತ್ರಣದಲ್ಲಿ ಅನುಶ್ರೀ ಹಾಸ್ಯಮಯ ಶೈಲಿಯಲ್ಲಿ ಬರೆದಿರುವ ಸಾಲುಗಳು ಅಭಿಮಾನಿಗಳ ಮನ ಸೆಳೆದಿವೆ –
“ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ.”
ಹೀಗಾಗಿ ಕನ್ನಡದ ಪ್ರಿಯ ಆ್ಯಂಕರ್ ಅನುಶ್ರೀ ಅವರ ಮದುವೆ ಸಂಭ್ರಮಕ್ಕೆ ಅಭಿಮಾನಿಗಳು ಮತ್ತು ಸಿನಿ ಲೋಕವೇ ಕಾತರದಿಂದ ಕಾಯುತ್ತಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
