Back to Top

‘ಜೈ ಹನುಮಾನ್’ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ

SSTV Profile Logo SStv October 18, 2024
ಜೈ ಹನುಮಾನ್ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ
ಜೈ ಹನುಮಾನ್ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ
‘ಜೈ ಹನುಮಾನ್’ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಜೈ ಹನುಮಾನ್ ಪಾರ್ಟ್ 2’ನಲ್ಲಿ ರಿಷಬ್ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸೂಪರ್ ಹಿಟ್ ಚಿತ್ರ ಜೈ ಹನುಮಾನ್ ಸಿನಿಮಾದ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ಈ ಚಿತ್ರದ ಪಾರ್ಟ್ 2ನಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟನನ್ನು ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ರಿಷಬ್ ಆಗಲಿ, ನಿರ್ಮಾಣ ಸಂಸ್ಥೆ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಸದ್ಯ ಹರಿದಾಡುತ್ತಿರುವ ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ. ಅಂದಹಾಗೆ, 2024ರಲ್ಲಿ ತೆರೆಕಂಡ ‘ಜೈ ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ ಮತ್ತು ಅಮೃತಾ ಅಯ್ಯರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ ಇದರ ಎರಡನೇ ಭಾಗಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ.