Back to Top

"ಅನ್ಯಾಯವಾದವರಿಗೆ ನ್ಯಾಯ ಬೇಕು" – ಧರ್ಮಸ್ಥಳ ಕೇಸ್ ಕುರಿತು ಸಂಜನಾ ಪ್ರತಿಕ್ರಿಯೆ

SSTV Profile Logo SStv August 25, 2025
ಧರ್ಮಸ್ಥಳ ಕೇಸ್ ಕುರಿತು ಸಂಜನಾ ಗಲ್ರಾನಿ ಪ್ರತಿಕ್ರಿಯೆ
ಧರ್ಮಸ್ಥಳ ಕೇಸ್ ಕುರಿತು ಸಂಜನಾ ಗಲ್ರಾನಿ ಪ್ರತಿಕ್ರಿಯೆ

ಧರ್ಮಸ್ಥಳ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. "ನಾಪತ್ತೆಯಾದ ಹೆಣ್ಮಕ್ಕಳ ಕುಟುಂಬಕ್ಕೆ ನ್ಯಾಯ ಸಿಗಬೇಕು. ಏನಾಗಿದೆ ಎಂಬುದರ ಬಗ್ಗೆ ನನಗೆ ರಾಜಕೀಯ ಗೊತ್ತಿಲ್ಲ. ಆದರೆ ಅನ್ಯಾಯ ಅನುಭವಿಸಿದವರಿಗೆ ನ್ಯಾಯ ಸಿಗಬೇಕು ಎಂಬುದು ನನ್ನ ಹಾರೈಕೆ" ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಸಿನಿಮಾ ಉದ್ಯಮದ ಕುರಿತು ಮಾತನಾಡಿದ ಸಂಜನಾ, "ಇಂದಿನ ಕಾಲದಲ್ಲಿ ಥಿಯೇಟರ್ ಕಾಲ ಹೋಗಿದೆ, ಎಲ್ಲರೂ ಮೊಬೈಲ್‌ ಮತ್ತು ಓಟಿಟಿ ಕಡೆ ತಿರುಗಿದ್ದಾರೆ. ಸಣ್ಣ ನಿರ್ಮಾಪಕರಿಗೆ ಇದು ಸಂಕಷ್ಟ ತಂದಿದೆ. ಈಗ ಒಂದು ಸಿನಿಮಾ ಸಿದ್ದವಾಗಬೇಕಾದರೂ 100 ಕೋಟಿ ರೂ. ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಹೇಳಿದ್ದಾರೆ.

ಅದೇ ರೀತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಅವರು, "ಸದ್ಯ ನಾನು ತಾಯ್ತನವನ್ನು ಅನುಭವಿಸುತ್ತಿದ್ದೇನೆ. ಮಕ್ಕಳು ದೊಡ್ಡವರಾದ ನಂತರ ಚಿತ್ರರಂಗಕ್ಕೆ ಮರಳುವೆ" ಎಂದು ತಿಳಿಸಿದ್ದಾರೆ.