Back to Top

ದರ್ಶನ್ ಜೈಲಿನಲ್ಲಿದ್ದರೂ ಫ್ಯಾನ್ಸ್ ಸೆಲೆಬ್ರೇಟ್ ಮಾಡ್ತಿದ್ದಾರೆ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು

SSTV Profile Logo SStv August 25, 2025
ದರ್ಶನ್ ಡೈಲಾಗ್ ಈಗ ಸೂಪರ್ ಹಿಟ್ ಸಾಂಗ್
ದರ್ಶನ್ ಡೈಲಾಗ್ ಈಗ ಸೂಪರ್ ಹಿಟ್ ಸಾಂಗ್

ದರ್ಶನ್ ಜೈಲಲ್ಲಿ ಇದ್ದಾಗಲೇ ಬಿಡುಗಡೆ ಆಯ್ತು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಇದೀಗ ಬಿಡುಗಡೆಯಾಗಿದೆ. ‘ದಿ ಡೆವಿಲ್’ ಸಿನಿಮಾದ ಈ ಹಾಡಿಗೆ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ದರ್ಶನ್ ಜೈಲಿನಲ್ಲಿರುವ ಕಾರಣದಿಂದಲೇ ಹಾಡಿನ ಬಿಡುಗಡೆಯನ್ನು ವಿಳಂಬ ಮಾಡಲಾಗಿತ್ತು. ಇದೀಗ ಬಿಡುಗಡೆಗೊಂಡ ಹಾಡನ್ನು ಅಭಿಮಾನಿಗಳು ಸಡಗರದಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ದರ್ಶನ್ ಅವರ ವೈಯಕ್ತಿಕ ಆಡಿಯೋದಲ್ಲಿ ಹೇಳಿದ್ದ “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಎಂಬ ಡೈಲಾಗ್‌ನಿಂದಲೇ ಈ ಹಾಡು ಪ್ರೇರಿತವಾಗಿದೆ.

ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದರೂ ಸಿನಿಮಾ ಕೆಲಸಗಳನ್ನು ಮುಂಚಿತವಾಗಿ ಮುಗಿಸಿದ್ದರು. ಹೀಗಾಗಿ ಸಿನಿಮಾದ ಪ್ರಚಾರ ಈಗ ನಿರಂತರವಾಗಿ ನಡೆಯುತ್ತಿದೆ.