ಕ್ಯಾನ್ಸರ್‌ನಿಂದ ಬಳಲುತ್ತಿರುವ ಕೆಜಿಎಫ್ ‘ಚಾಚಾ’ – ಯಶ್ ಪ್ರತಿಕ್ರಿಯೆ ಎಲ್ಲರ ಮನ ಕದ್ದಿತು


ಕನ್ನಡದ ಹಿರಿಯ ನಟ ಹರೀಶ್ ರಾಯ್ ತೀವ್ರ ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟಿರುವ ಈ ಸಮಯದಲ್ಲಿ ಅವರ ಬದುಕಿಗಾಗಿ ಧೈರ್ಯ ತುಂಬಿದವರು ಯಾರು ಗೊತ್ತಾ? ಅದೇ ನಮ್ಮ ರಾಕಿಂಗ್ ಸ್ಟಾರ್ ಯಶ್.
‘ಕೆಜಿಎಫ್’ ಸಿನಿಮಾದಲ್ಲಿ ಚಾಚಾ ಪಾತ್ರದಲ್ಲಿ ನಟಿಸಿದ್ದ ಹರೀಶ್ ರಾಯ್ ಹಾಗೂ ಯಶ್ ಒಟ್ಟಿಗೆ ಸಾಕಷ್ಟು ಕಾಲ ಶೂಟಿಂಗ್ ನಡೆಸಿದ್ದು, ಅದರಿಂದ ಇವರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು.
2024ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ಹರೀಶ್ ರಾಯ್ ಅವರು ಭಾವುಕರಾಗಿ ಹೀಗೆ ಹೇಳಿದ್ದಾರೆ: “ಯಶ್ ನನಗೆ ಕರೆ ಮಾಡಿ – ತಲೆಕೆಡಿಸಿಕೊಳ್ಳಬೇಡಿ, ನಾನು ಹಣ ಹಾಕ್ತೀನಿ ಎಂದರು. ಬೇಡ ಎಂದರೂ, ಪತ್ನಿಯ ಜೊತೆ ಮಾತನಾಡಿ ಸಹಾಯ ಮಾಡಲು ಮುಂದಾದರು. ಯಶ್ ಒಳ್ಳೆಯ ಹೃದಯದವರು. ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಎಂದು ಹೇಳಿದರು.”
ಯಶ್ ಜೊತೆಗಿನ ಆಪ್ತತೆಯನ್ನು ಹರೀಶ್ ರಾಯ್ ಭಾವುಕರಾಗಿ ನೆನೆಸಿಕೊಂಡಿದ್ದರು. “ಯಶ್ ನನಗೆ ಅಣ್ಣನ ಹಾಗೆ. ನಾನು ಮೆಸೇಜ್ ಹಾಕಿದ್ರೆ ಸಾಲದು, ತಕ್ಷಣ ಕಾಲ್ ಮಾಡ್ತಾರೆ. ದರ್ಶನ್ ಮತ್ತು ಯಶ್ ಇಬ್ಬರೂ ನನ್ನ ಬತ್ತಳಿಕೆಯಲ್ಲಿ ಇದ್ದಾರೆ. ಅದೇ ನನ್ನ ಬಲ.” ಎಂದು ಹೇಳಿದ್ದಾರೆ.
ಆರೋಗ್ಯದ ಸಮಸ್ಯೆ ತೀವ್ರವಾದರೂ, ಯಶ್ ನೀಡಿದ ಭರವಸೆಯು ಹರೀಶ್ ರಾಯ್ ಮನದಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಅವರ ಕಾಯಿಲೆಯಿಂದ ಹೊರಬಂದು ಮತ್ತೆ ಬೆಳ್ಳಿ ತೆರೆಗೆ ಬರಲಿ ಎನ್ನುವುದು ಎಲ್ಲರ ಹಾರೈಕೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
