ಬಿಗ್ ಬಾಸ್ ರಜತ್ ಕಿಶನ್‌ಗೆ ಧರ್ಮಸ್ಥಳ ಪೊಲೀಸರು ವಿಚಾರಣಾ ನೋಟಿಸ್ – ರಜತ್ ಹಾಜರಾಗದಿದ್ದರೆ ಗಂಭೀರ ಕ್ರಮ?


ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಾಗೂ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ಮತ್ತಷ್ಟು ರೋಚಕ ತಿರುವು ಪಡೆದಿದೆ. ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಅವರಿಗೆ ಧರ್ಮಸ್ಥಳ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಆಗಸ್ಟ್ 6, 2025ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಗ್ರಾಮದ ಪಾಂಗಾಳ ಕ್ರಾಸ್ ಬಳಿ ಗಲಾಟೆ ನಡೆದಿತ್ತು. ಯೂಟ್ಯೂಬರ್ ಅಜಯ್ ಬಿ (ಕೂಡ್ಲ ರಾಂಪೇಜ್) ಬೈಟ್ ತೆಗೆಯುತ್ತಿದ್ದ ವೇಳೆ, ಆರೋಪಿಗಳಾದ ಧನಕೀರ್ತಿ ಅರಿಗ ಹಾಗೂ ಇತರರು ಸೇರಿ ಅಕ್ರಮ ಕೂಟ ನಡೆಸಿ ಅಜಯ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ಸಮಯದಲ್ಲಿ ರಜತ್ ಕೂಡ ಸ್ಥಳದಲ್ಲಿದ್ದರು. ದೂರುದಾರ ಅಜಯ್ ಬಿ ಅವರ ದೂರು ಆಧರಿಸಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS-2023 ಅಡಿಯಲ್ಲಿ ಸೆಕ್ಷನ್ 189(2), 191(2), 115(2), 324(53), 352, 307, 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೆ ಹೆಚ್ಚುವರಿಯಾಗಿ, ಶಾರದಾ ಭಟ್ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ರಜತ್ ವಿರುದ್ಧ ಗಂಭೀರ ಬೆದರಿಕೆ ಹಾಕಿದ್ದಾರೆ. "ನಮ್ಮ ಪವಿತ್ರ ಧರ್ಮಸ್ಥಳ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆ ವಿರುದ್ಧ ಮಾತನಾಡುವ ಎಲ್ಲರಿಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ಕಾರಣಕ್ಕೆ, ರಜತ್ ಕಿಶನ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಆ.28 ರಂದು ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅವರು ಹಾಜರಾಗಬೇಕು ಎಂದು ತಿಳಿಸಲಾಗಿದೆ.
ಈ ಘಟನೆ ಕೇವಲ ಹಲ್ಲೆ ಪ್ರಕರಣಕ್ಕೆ ಸೀಮಿತವಾಗದೇ, ಧರ್ಮಸ್ಥಳದ ಪವಿತ್ರತೆಯ ವಿಚಾರವನ್ನೂ ಸ್ಪರ್ಶಿಸಿರುವುದರಿಂದ ಪ್ರಕರಣಕ್ಕೆ ಹೆಚ್ಚಿನ ಗಂಭೀರತೆ ಬಂದಿದೆ. ಅಲ್ಲದೆ, ರಜತ್ ಕಿಶನ್ ವಿರುದ್ಧ ಬರುತ್ತಿರುವ ಬೆದರಿಕೆ ಕರೆಗಳು ಅವರ ಭದ್ರತೆ ಬಗ್ಗೆ ಪ್ರಶ್ನೆ ಎಬ್ಬಿಸುತ್ತಿವೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
