“ಟಾಕ್ಸಿಕ್” ಆ್ಯಕ್ಷನ್ ಶೂಟ್‌ಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ‍್ರಿ ಎಂಟ್ರಿ


ರಾಕಿಂಗ್ ಸ್ಟಾರ್ ಯಶ್ ನಟಿಸಿ ನಿರ್ಮಿಸುತ್ತಿರುವ ಪ್ಯಾನ್-ವರ್ಡ್ ಸಿನಿಮಾ ಟಾಕ್ಸಿಕ್ ತನ್ನ ಆ್ಯಕ್ಷನ್ ಶೂಟ್ ಆರಂಭಿಸಿದೆ. ವಿಶೇಷ ಅಂದ್ರೆ, ಹಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ಜೆಜೆ ಪೆರ‍್ರಿ ಮೊದಲ ಬಾರಿಗೆ ಭಾರತಕ್ಕೆ ಬಂದು ಕೆಲಸ ಶುರು ಮಾಡಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಭಾರತೀಯ ಸ್ಟಂಟ್ ತಂಡವೂ ಕೈಜೋಡಿಸಿದೆ. ಹಿಂದಿನ ಸಾಹಸ ದೃಶ್ಯಗಳಿಗೆ ಹೋಲಿಕೆಯಾಗದ ಹೊಸ ಪ್ರಯೋಗಗಳನ್ನು ಜೆಜೆ ಪೆರ‍್ರಿ ಮಾಡುತ್ತಿದ್ದಾರೆ.
45 ದಿನಗಳ ಕಾಲ ನಡೆಯಲಿರುವ ಈ ಸಾಹಸ ಚಿತ್ರೀಕರಣ, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ. ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಜೆಜೆ ಪೆರ‍್ರಿ ವರ್ಕಿಂಗ್ ಸ್ಟೈಲ್ ಈಗಾಗಲೇ ವೈರಲ್ ಆಗಿದೆ. ಹಾಲಿವುಡ್ ಮಟ್ಟದ ಆ್ಯಕ್ಷನ್ ಮೂಲಕ ಟಾಕ್ಸಿಕ್ ಸಿನಿಮಾ ವಿಶ್ವದ ಗಮನ ಸೆಳೆಯಲಿದೆ ಎನ್ನುವುದು ಖಚಿತ.
ಈ ಭರ್ಜರಿ ಬಿಗ್ ಬಜೆಟ್ ಸಿನಿಮಾ ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಮತ್ತು ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
