ಬಿಗ್ ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ – ಜಾತಿ ನಿಂದನೆ ಪ್ರಕರಣದಲ್ಲಿ ಅರೆಸ್ಟ್!


‘ಬಿಗ್ ಬಾಸ್ ಕನ್ನಡ ಸೀಸನ್ 11’ನಲ್ಲಿ ಸ್ಪರ್ಧಿಸಿದ್ದ ಲಾಯರ್ ಜಗದೀಶ್ ಅವರನ್ನು ಜಾತಿ ನಿಂದನೆ ಆರೋಪದಡಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಎಂಬುವವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಅವರನ್ನು ಅರೆಸ್ಟ್ ಮಾಡಲಾಯಿತು.
ಸೋಶಿಯಲ್ ಮೀಡಿಯಾದಲ್ಲಿ ಸದಾ ವಿವಾದಗಳಿಗೆ ಕಾರಣರಾಗುತ್ತಿದ್ದ ಜಗದೀಶ್ ಅವರ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದಿತ್ತು. ಆಗಸ್ಟ್ 21ರಂದು ಅವರಿಗೆ ನೋಟಿಸ್ ನೀಡಲು ಹೋದಾಗ, ಬಾಗಿಲು ತೆರೆಯದೇ ಡ್ರಾಮಾ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಂಧನದ ಸಮಯದಲ್ಲಿ ಜಗದೀಶ್ ಸ್ವತಃ ಫೇಸ್ಬುಕ್ ಲೈವ್ ವಿಡಿಯೋ ಮಾಡಿ – “ಇದು ಸಾಮಾನ್ಯ ಪ್ರಕ್ರಿಯೆ, ಯಾರೂ ಅಶಾಂತಿ ಮಾಡಬೇಡಿ. ನಾನು ಧ್ವನಿ ಎತ್ತಿರುವುದು ತಪ್ಪಲ್ಲ” ಎಂದು ಹೇಳಿದ್ದಾರೆ. ಬಳಿಕ ಪೋಸ್ಟ್ನಲ್ಲಿ “ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನನ್ನ ಸಾಕಿದ್ದ ನಾಯಿಗಳನ್ನು ವಿಷ ಹಾಕಿ ಕೊಂದಿದ್ದಾರೆ, ಇದು ಕೇವಲ ಪ್ರಾಣಿಗಳ ಮೇಲಿನ ದೌರ್ಜನ್ಯವಲ್ಲ – ನಮ್ಮ ಕುಟುಂಬದ ಮೇಲಿನ ದಾಳಿ” ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
