Back to Top

“ಅನುಶ್ರೀ ಹೆಸರು ಮಾಡೋಕೆ ನಾವೇ ಕಾರಣ, ಇಂದು ನಮಗಿಲ್ಲ ಎಂಟ್ರಿ” – ಫ್ಯಾನ್ಸ್ ಅಸಮಾಧಾನ!

SSTV Profile Logo SStv August 28, 2025
ಅನುಶ್ರೀ–ರೋಷನ್ ಮದುವೆಗೆ ಫ್ಯಾನ್ಸ್‌ಗಿಲ್ಲ ಎಂಟ್ರಿ
ಅನುಶ್ರೀ–ರೋಷನ್ ಮದುವೆಗೆ ಫ್ಯಾನ್ಸ್‌ಗಿಲ್ಲ ಎಂಟ್ರಿ

ಜನಪ್ರಿಯ ಆ್ಯಂಕರ್ ಹಾಗೂ ನಟಿ ಅನುಶ್ರೀ ತಮ್ಮ ಬಹುಕಾಲದ ಗೆಳೆಯ, ಕೊಡಗು ಮೂಲದ ಉದ್ಯಮಿ ರೋಷನ್ ಅವರೊಂದಿಗೆ ಇಂದೇ (ಆಗಸ್ಟ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದ ಕಗ್ಗಲಿಪುರದ ಲಕ್ಸುರಿ ರೆಸಾರ್ಟ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ.

ಆದರೆ, ಹಬ್ಬದ ಸಂಭ್ರಮಕ್ಕಿಂತ ಅಭಿಮಾನಿಗಳ ಅಸಮಾಧಾನ ಹೆಚ್ಚು ಸುದ್ದಿಯಾಗಿದೆ. ಕಾರಣವೇನೆಂದರೆ ಅನುಶ್ರೀ ಮದುವೆಗೆ ಆಮಂತ್ರಣ ಪತ್ರಿಕೆ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದುಕೊಂಡಿದ್ದ ಅಭಿಮಾನಿಗಳಿಗೆ ಒಳಗೆ ಹೋಗಲು ಅವಕಾಶ ಸಿಗದೇ, ಭಾರೀ ನಿರಾಸೆಯಿಂದ ಹಿಂತಿರುಗಬೇಕಾಯಿತು.

ಫ್ಯಾನ್ಸ್‌ ಅಸಮಾಧಾನ ಹೊರ ಹಾಕಿ, “ಅನುಶ್ರೀ ಹೆಸರು ಮಾಡೋಕೆ ನಾವೇ ಕಾರಣ. ಇಂದು ಮದುವೆ ಮನೆಯಲ್ಲಿ ನಮಗೆ ಎಂಟ್ರಿಯೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ, ಸೆಲೆಬ್ರಿಟಿಗಳ ಭಾರೀ ಹಾಜರಾತಿ ನಿರೀಕ್ಷೆಯಿರುವುದರಿಂದ ಭದ್ರತಾ ಕ್ರಮ ಬಿಗಿಗೊಳಿಸಲಾಗಿದ್ದು, ಅಭಿಮಾನಿಗಳನ್ನು ಒಳಗೆ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅನುಶ್ರೀ ವಿವಾಹದ ಸುದ್ದಿ ಯಾವುದೇ ರೀತಿಯ ಅಧಿಕೃತ ಘೋಷಣೆ ಇಲ್ಲದೆ, ಆಮಂತ್ರಣ ಪತ್ರಿಕೆ ವೈರಲ್ ಆಗುವುದರ ಮೂಲಕವೇ ಹೊರಬಂದಿತ್ತು. ಈಗ ಮದುವೆಯ ಸಡಗರ-ಭದ್ರತೆ ಎರಡಕ್ಕೂ ಅಭಿಮಾನಿಗಳು ಬಲಿಯಾಗುವಂತಾಗಿದೆ.