ನಿರೂಪಕಿ-ನಟಿ ಅನುಶ್ರೀ ಹೊಸ ಜೀವನ ಪಯಣ ಆರಂಭ – ರೆಸಾರ್ಟ್‌ನಲ್ಲಿ ಅದ್ಧೂರಿ ಸಂಭ್ರಮ!


ಕನ್ನಡದ ಜನಪ್ರಿಯ ಆ್ಯಂಕರ್ ಹಾಗೂ ನಟಿ ಅನುಶ್ರೀ ಹೊಸ ಜೀವನ ಪಯಣ ಆರಂಭಿಸಿದ್ದಾರೆ. ಇಂದು (ಆಗಸ್ಟ್ 28) ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಹಸೆಮಣೆಯೇರಿದ ಅನುಶ್ರೀ, 10:56ರ ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬೆಂಗಳೂರು ಹೊರವಲಯದ ಕಗ್ಗಲಿಪುರದ ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಕಿರುತೆರೆ ಕಲಾವಿದರು, ಚಿತ್ರರಂಗದ ಗಣ್ಯರು ಹಾಗೂ ಆತ್ಮೀಯ ಸ್ನೇಹಿತರು ಹಾಜರಾಗಿ ನವಜೋಡಿಗೆ ಶುಭಾಶಯ ಕೋರಿ ಆಶೀರ್ವಾದ ಮಾಡಿದ್ದಾರೆ. ಮದುವೆಯ ಆಹ್ವಾನ ಪತ್ರಿಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿತ್ತು.
ಮದುವೆಗೆ ಮುನ್ನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರ ಭರ್ಜರಿ ಸಂಭ್ರಮದ ವಾತಾವರಣ ಸೃಷ್ಟಿಸಿತು. ಹಳದಿ ಉಡುಪಿನಲ್ಲೇ ಮಿಂಚಿದ ಅನುಶ್ರೀ-ರೋಷನ್ ದಂಪತಿ ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಹಬ್ಬದ ರಂಗು ತುಂಬಿಸಿತು. ವಿಶಿಷ್ಟವಾಗಿ, ಈ ವೇಳೆ ಇಬ್ಬರೂ ಸು ಫ್ರಂ ಸೋ ಚಿತ್ರದ ‘ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಸಂಭ್ರಮ ಹಂಚಿಕೊಂಡರು.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಳದಿ ಶಾಸ್ತ್ರದ ಫೋಟೋಗಳು ಹಾಗೂ ಮದುವೆ ಕ್ಷಣಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಹಲವು ವರ್ಷಗಳಿಂದ ನಿರೂಪಣಾ ಲೋಕದಲ್ಲಿ ಎಲ್ಲರ ಮನ ಗೆದ್ದ ಅನುಶ್ರೀ, ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದರಿಂದ ಅಭಿಮಾನಿಗಳ ಹಾರೈಕೆ ಶುಭ ಸಂದೇಶಗಳಿಂದ ಸಾಮಾಜಿಕ ಜಾಲತಾಣ ತುಂಬಿಕೊಂಡಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
