Back to Top

ಆಯುಧ ಪೂಜೆಯ ದಿನದಂದೇ ಸಿಹಿಸುದ್ದಿ ಕೊಟ್ಟ ಯುವ ಚಿತ್ರದ ಪೋಸ್ಟರ್‌ ಔಟ್

SSTV Profile Logo SStv October 14, 2024
ಯುವ ಚಿತ್ರದ ಪೋಸ್ಟರ್‌ ಔಟ್
ಯುವ ಚಿತ್ರದ ಪೋಸ್ಟರ್‌ ಔಟ್
ಆಯುಧ ಪೂಜೆಯ ದಿನದಂದೇ ಸಿಹಿಸುದ್ದಿ ಕೊಟ್ಟ ಯುವ ಚಿತ್ರದ ಪೋಸ್ಟರ್‌ ಔಟ್ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಕೊನೆಗೂ ಮುಂದಿನ ಸಿನಿಮಾದ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಂದು (ಅ.11) ಆಯುಧ ಪೂಜೆಯ ದಿನದಂದೇ ಹೊಸ ಚಿತ್ರದ ಪೋಸ್ಟರ್ ಶೇರ್ ಮಾಡಿ ಅಧಿಕೃತವಾಗಿ ಮುಂದಿನ ಸಿನಿಮಾ ‘ಯುವ 02’ ಕುರಿತು ಮಾಹಿತಿ ನೀಡಿದ್ದಾರೆ.‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ‌ ಜೊತೆ ಯುವ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಯುವ, ರಕ್ತ ಸಿಕ್ತವಾಗಿರುವ ಪೋಸ್ಟರ್‌ ಶೇರ್‌ ಮಾಡಿದ್ದಾರೆ. ಚಿತ್ರದ ಪೋಸ್ಟರ್‌ ಲುಕ್‌ ನೋಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ‘ಯುವ 02’ ಎಂದು ಚಿತ್ರವನ್ನು ಹೆಸರಿಸಲಾಗಿದೆ.ಇನ್ನೂ ಪೋಸ್ಟರ್ ಅನ್ನು ಸರಿಯಾಗಿ ಗಮನಿಸಿದರೆ ಯುವ ಕೈ ಮೇಲೆ ‘ರತ್ನ’ ಎನ್ನುವ ಹಚ್ಚೆ ಇರುವುದನ್ನು ನೋಡಬಹುದು. ಚಿತ್ರದಲ್ಲಿ ರತ್ನ ಯಾರು? ನಾಯಕನ ತಾಯಿನಾ? ಅಥವಾ ಸಹೋದರಿನಾ? ಇಲ್ಲ ಪ್ರೇಯಸಿನಾ? ಆಕೆಗಾಗಿಯೇ ಈ ರಕ್ತ ಚರಿತ್ರೆ ನಡೆಯುತ್ತಾ? ಎನ್ನುವ ಪ್ರಶ್ನೆಗಳಿಗೆಲ್ಲಾ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ನವೆಂಬರ್ 2ರಂದು ಚಿತ್ರತಂಡ ಅನೌನ್ಸ್ ಮಾಡಲಿದ್ದಾರೆ. ಯುವ ರಾಜ್‌ಕುಮಾರ್ ನಟನೆಯ ಮುಂದಿನ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ , ಜಯಣ್ಣ & ಭೋಗೇಂದ್ರ, ಕೆಆರ್‌ಜಿ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.