ಫ್ಯಾಮಿಲಿ ಡಿನ್ನರ್‌ನಲ್ಲಿ ಯಶ್-ರಾಧಿಕಾ ಸರಳತೆಗೆ ಫ್ಯಾನ್ಸ್ ಫಿದಾ
ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ಡಿನ್ನರ್ ಮಾಡಿದ್ದು, ಅವರ ಸರಳತೆ ಅಭಿಮಾನಿಗಳ ಮನ ಗೆದ್ದಿದೆ. ಬಾಲಿವುಡ್ ಬ್ಯುಸಿನಸ್ ನಡುವೆ, ಯಶ್ ತಮ್ಮ ಬಾಡಿಗಾರ್ಡ್ ಶ್ರೀನಿವಾಸ್ ಮತ್ತು ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಜೊತೆಗೆ ಒಂದೇ ಟೇಬಲ್‌ನಲ್ಲಿ ಊಟ ಮಾಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅವರು ತಮ್ಮ ಪ್ಯಾನ್-ಇಂಡಿಯಾ ಖ್ಯಾತಿಯನ್ನು ತೊಡೆದು ಹಾಕಿ, "ಕಾಮನ್ ಮ್ಯಾನ್" ಆಗಿ ಜೀವಿಸುತ್ತಿದ್ದಾರೆ. ಈ ಸಿಂಪ್ಲಿಸಿಟಿಯಿಂದ ಅಭಿಮಾನಿಗಳು ಮೋಹಿತರಾಗಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್, ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ಇದ್ದರೂ, ಕನ್ನಡ ಅಭಿಮಾನಿಗಳ ಜೊತೆ ಕನ್ನಡದಲ್ಲಿಯೇ ಮಾತನಾಡಿ, ಫ್ಯಾನ್ಸ್ ಹೃದಯ ಗೆದ್ದಿದ್ದಾರೆ.
"ಟಾಕ್ಸಿಕ್" ಚಿತ್ರದ ಚಿತ್ರೀಕರಣದಲ್ಲಿಯೇ ಬ್ಯುಸಿ ಇರುವ ಯಶ್, ಬೊತ್ತಿರುವ ಸಮಯದಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.