ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಚಿತ್ರ 'ಟಾಕ್ಸಿಕ್' ಕುರಿತು ಅಭಿಮಾನಿಗಳ ಕುತೂಹಲ ತಾರಕಕ್ಕೇರಿದೆ. ಇತ್ತೀಚೆಗೆ ಯಶ್ ಲಾಯರ್ (ವಕೀಲ್) ಗೆಟಪ್‌ನಲ್ಲಿ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಕೆಜಿಎಫ್' ನಂತರ ಯಶ್ ಅವರು ಈ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಾಕ್ಸಿಕ್ ನಿರ್ದೇಶನವನ್ನು ಗೀತು ಮೋಹನ್ ದಾಸ್ ಮಾಡುತ್ತಿದ್ದು, ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಉತ್ಸುಕತೆಯಿದೆ. ಲಾಯರ್ ಲುಕ್‌ನಲ್ಲಿ ಯಶ್ ಅವರ ಖಡಕ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಈ ವಿಡಿಯೋ ಸಖತ್ ಟ್ರೆಂಡಿಂಗ್ ಆಗುತ್ತಿದೆ.