ಗೌರಿ-ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಾಶಯ ಕೋರಿದ ‘ಡೆವಿಲ್’ ಚಿತ್ರದ ಹೀರೋಯಿನ್ ರಚನಾ ರೈ!


ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರ ‘ಡೆವಿಲ್’ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ರಚನಾ ರೈ, ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಡಿಸೆಂಬರ್ 12ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿಯೇ ನಟಿಸುತ್ತಿರುವುದು ಇವರಿಗೆ ದೊಡ್ಡ ಸಾಧನೆ.
ಇದೇ ಸಮಯದಲ್ಲಿ, ರಚನಾ ರೈ ಗೌರಿ-ಗಣೇಶ ಹಬ್ಬದ ಮುನ್ನವೇ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀರೆ ಉಟ್ಟು, ಆಭರಣ ತೊಟ್ಟು, ಕನ್ನಡ ಸಂಪ್ರದಾಯದ ಶೋಭೆಯನ್ನು ಹೆಚ್ಚಿಸಿದ ಅವರು, ನಾಡಿನ ಜನತೆಗೆ ಹಾಗೂ ಮಾಧ್ಯಮ ಸ್ನೇಹಿತರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದ ರಚನಾ, ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರೋತ್ಸಾಹ ಸಿಗಲೆಂದು ಆಶಿಸಿದ್ದಾರೆ. ಜೊತೆಗೆ, ತಮ್ಮ ಅಭಿನಯದ ‘ಡೆವಿಲ್’ ಚಿತ್ರಕ್ಕೂ ಎಲ್ಲರಿಂದ ಪ್ರೀತಿ ಇರಲಿ ಎಂದು ಕೇಳಿಕೊಂಡಿದ್ದಾರೆ.
ಈ ಬಾರಿ ದರ್ಶನ್ ಜೊತೆ ಜೋಡಿಯಾಗಿ ನಟಿಸುತ್ತಿರುವುದರಿಂದ, ಅವರ ಜೋಡಿ ಹೇಗೆ ಪರದೆ ಮೇಲೆ ಮೂಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಮತ್ತು ಫೋಟೋಗಳು ದರ್ಶನ್ ಪಾತ್ರವನ್ನು ಮಾತ್ರ ಬಹಿರಂಗಪಡಿಸಿವೆ. ರಚನಾ ರೈ ಪಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿದ ಒಂದು ಹಾಡು ವೈರಲ್ ಆಗಿದ್ದು, ಅದರಲ್ಲೂ ದರ್ಶನ್ ಲುಕ್ ಗಮನ ಸೆಳೆದಿತ್ತು. ಆದರೆ ರಚನಾ ರೈ ಪಾತ್ರದ ಕುತೂಹಲ ಇನ್ನೂ ಹೆಚ್ಚಾಗಿದೆ.
ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ವೈರಲ್ ಆಗಿದೆ. ರಚನಾ ರೈ ಅವರ ಈ ಹಬ್ಬದ ಶುಭಾಶಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
