ಯಶ್ `ಟಾಕ್ಸಿಕ್’ಗೆ ಹೊಸ ವಿಲನ್ ಸೇರ್ಪಡೆ ಕೆಜಿಎಫ್' ಖ್ಯಾತಿಯ ಯಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಟಾಕ್ಸಿಕ್' ಸಿನಿಮಾದಲ್ಲಿ ಹೊಸ ಕಲಾವಿದನ ಸೇರ್ಪಡೆ ನಡೆದಿದೆ. ಟಾಲಿವುಡ್‌ನ ಹಿರಿಯ ನಟ, ಬಹುಮುಖ ಪ್ರತಿಭೆ ತನಿಕೆಲ್ಲ ಭರಣಿ ಈ ಚಿತ್ರದಲ್ಲಿ ಭಾಗವಹಿಸಿರುವ ಸುದ್ದಿ ಇದೀಗ ವೈರಲ್ ಆಗಿದೆ.
ಯಾವುದೇ ಅಧಿಕೃತ ಮಾಹಿತಿ ನೀಡದಿದ್ದರೂ, ಭರಣಿಯ ಇನ್ಸ್ಟಾಗ್ರಾಮ್‌ನಲ್ಲಿ ಯಶ್ ಜೊತೆಗೆ ಶೂಟಿಂಗ್ ಕಾಸ್ಟ್ಯೂಮ್‌ನಲ್ಲಿ ಕ್ಯಾರೆವ್ಯಾನ್‌ನಲ್ಲಿ ತೆಗೆಸಿಕೊಂಡಿರುವ ಫೋಟೋ ಈ ಸುದ್ದಿಗೆ ಮುಕ್ತಿ ನೀಡಿದೆ. ಇದರಿಂದ ಭರಣಿ, `ಟಾಕ್ಸಿಕ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಟಾಕ್ಸಿಕ್ ಚಿತ್ರದ ತಾರಾಗಣದ ಕುರಿತು ನಿಗೂಢತೆ
ಇಷ್ಟರಲ್ಲೇ ನಟಿ ನಯನತಾರಾ ಕೂಡ ಶೂಟಿಂಗ್ ಮುಗಿಸಿರುವುದು ತಿಳಿದುಬಂದಿದೆ. ಆದರೆ, ಭರಣಿ ವಿಲನ್ ಪಾತ್ರ ಮಾಡ್ತಾರಾ ಅಥವಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳ್ತಾರಾ ಅನ್ನೋ ಕುತೂಹಲ ಇನ್ನೂ ಉಳಿದೇ ಇದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬರಬೇಕಿದೆ.