Back to Top

ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶ್ವೇತಾ ಚೆಂಗಪ್ಪ ಥೈಲ್ಯಾಂಡ್ ಟ್ರಿಪ್ ಫೋಟೋಗಳು

SSTV Profile Logo SStv August 25, 2025
ಥೈಲ್ಯಾಂಡ್ ಬೀಚ್‌ನಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ
ಥೈಲ್ಯಾಂಡ್ ಬೀಚ್‌ನಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ

ಕನ್ನಡದ ಜನಪ್ರಿಯ ಕಿರುತೆರೆ ನಟಿ ಮತ್ತು ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಇತ್ತೀಚೆಗೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ಹಂಚಿಕೊಂಡ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.

ಸುಮತಿ, ಕಾದಂಬರಿ ಮುಂತಾದ ಧಾರಾವಾಹಿಗಳ ಮೂಲಕ ಮನೆಮಾತಾದ ಶ್ವೇತಾ, ಈಗಾಗಲೇ ಎರಡು ದಶಕಗಳಿಂದ ಕಿರುತೆರೆಯಲ್ಲಿ ನಟಿ ಮತ್ತು ನಿರೂಪಕಿ ಆಗಿ ಮಿಂಚುತ್ತಿದ್ದಾರೆ. ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಶ್ವೇತಾ, ಇದೀಗ ಸ್ವಲ್ಪ ಬ್ರೇಕ್ ತೆಗೆದುಕೊಂಡು ಟ್ರಾವೆಲ್ ಮೋಡ್ನಲ್ಲಿ ಮಿಂಚುತ್ತಿದ್ದಾರೆ.

ಸದ್ಯ ಶ್ವೇತಾ ಚೆಂಗಪ್ಪ ಥೈಲ್ಯಾಂಡ್‌ನ ಬೀಚ್‌ ಹಾಗೂ ಬೋಟ್‌ನಲ್ಲಿ ಪೋಸ್ ಕೊಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಸುಂದರ ಸ್ಥಳ, ಸುಂದರ ನೆನಪುಗಳು, ಸುಂದರ ನಾನು. ನೀವು ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೀರಿ, ಊಹಿಸಿ ಮುಂದುವರಿಸಿ.. ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ" ಎಂದು ಬರೆದುಕೊಂಡಿರುವ ಶ್ವೇತಾ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಶ್ವೇತಾ ಹಂಚಿಕೊಂಡ ಈ ಥೈಲ್ಯಾಂಡ್ ಪ್ರವಾಸದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ಅದ್ಭುತ", "ನಮ್ಮ ಫೇವರಿಟ್ ಆಕ್ಟ್ರೆಸ್" ಎಂದು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.