Back to Top

ಬಿಗ್‌ ಬಾಸ್‌ ಶೋಗೆ ಸುದೀಪ್ ಸಂಭಾವನೆ ಎಷ್ಟು?- ನಟ ಹೇಳೋದೇನು

SSTV Profile Logo SStv September 24, 2024
ಸುದೀಪ್  ಸಂಭಾವನೆ ಎಷ್ಟು
ಸುದೀಪ್ ಸಂಭಾವನೆ ಎಷ್ಟು
ಬಿಗ್‌ ಬಾಸ್‌ ಶೋಗೆ ಸುದೀಪ್ ಸಂಭಾವನೆ ಎಷ್ಟು?- ನಟ ಹೇಳೋದೇನು 'ಬಿಗ್ ಬಾಸ್ ಕನ್ನಡ ಸೀಸನ್ 11' ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಮತ್ತೊಮ್ಮೆ ನಿರೂಪಕನಾಗಿ ಮರಳುತ್ತಿದ್ದಾರೆ. ಈ ಶೋಗೆ ಅವರು ಪಡೆಯುತ್ತಿರುವ ಸಂಭಾವನೆ ಕುರಿತು ಕುತೂಹಲ ಹೆಚ್ಚಾಗಿದ್ದು, ಪ್ರೆಸ್ ಮೀಟ್‌ನಲ್ಲಿ ಈ ಬಗ್ಗೆ ಪ್ರಶ್ನೆ ಎದುರಾದಾಗ, ಸುದೀಪ್ ನಗುತ್ತಾ ಪ್ರತಿಕ್ರಿಯಿಸಿದರು. "ನಾನು ಯೋಗ್ಯತೆಯಷ್ಟು ದುಡಿಯುತ್ತೇನೆ. 10 ವರ್ಷ 'ಬಿಗ್ ಬಾಸ್'ಗೆ ಮತ್ತು 28 ವರ್ಷ ಸಿನಿಮಾ ಇಂಡಸ್ಟ್ರಿಗೆ ಸೇವೆ ನೀಡಿದ್ದೇನೆ. ಆಮೇಲೆ ಒಳ್ಳೆಯ ಸಂಭಾವನೆಯೇ ಪಡೆಯುತ್ತಿದ್ದೇನೆ ಅಲ್ವಾ?" ಎಂದು ಸುದೀಪ್ ಸ್ಪಷ್ಟಪಡಿಸಿದರು. ಸಂಬಳದ ಬಗ್ಗೆ ನಿಖರ ಮಾಹಿತಿ ನೀಡದಿದ್ದರೂ, ಶೋಗೆ ತಮ್ಮ ಸಂಪೂರ್ಣ ನಿಷ್ಠೆಯನ್ನು ನೀಡುತ್ತಿರುವುದಾಗಿ ಅವರು ತಿಳಿಸಿದರು. 'ಬಿಗ್ ಬಾಸ್ ಸೀಸನ್ 11' ಸೆಪ್ಟೆಂಬರ್ 29ರಂದು ಲಾಂಚ್ ಆಗಲಿದ್ದು, ಅಭಿಮಾನಿಗಳು ಕಿಚ್ಚನ ನಿರೂಪಣೆಯನ್ನು ನೋಡಲು ತೀವ್ರವಾಗಿ ಕಾಯುತ್ತಿದ್ದಾರೆ.