Back to Top

ಬಿಗ್ ಬಾಸ್​ಗೆ ಬರೋಕೆ ಇನ್ನೊಂದು ಅವಕಾಶ ಕೊಡಿ ಸುದೀಪ್ ಬಳಿ ಮನವಿ ಮಾಡಿದ ಹುಚ್ಚ ವೆಂಕಟ್

SSTV Profile Logo SStv September 27, 2024
ಸುದೀಪ್ ಬಳಿ ಮನವಿ ಮಾಡಿದ ಹುಚ್ಚ ವೆಂಕಟ್
ಸುದೀಪ್ ಬಳಿ ಮನವಿ ಮಾಡಿದ ಹುಚ್ಚ ವೆಂಕಟ್
ಬಿಗ್ ಬಾಸ್​ಗೆ ಬರೋಕೆ ಇನ್ನೊಂದು ಅವಕಾಶ ಕೊಡಿ ಸುದೀಪ್ ಬಳಿ ಮನವಿ ಮಾಡಿದ ಹುಚ್ಚ ವೆಂಕಟ್ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದೆ. ಈಗಾಗಲೇ ಸ್ಪರ್ಧಿಗಳ ಹೆಸರು ಕೂಡ ಫೈನಲ್ ಆಗಿದೆ. ಈ ಮಧ್ಯೆ ಹುಚ್ಚ ವೆಂಕಟ್ ಅವರು ಒಂದು ಮನವಿ ಮಾಡಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ನಟ ಹುಚ್ಚ ವೆಂಕಟ್ ಅವರು ಬಿಗ್ ಬಾಸ್​ಗೆ ಬಂದು ಕಿರಿಕ್ ಮಾಡಿಕೊಂಡಿದ್ದರು. ಸಹ ಸ್ಪರ್ಧಿಯ ಮೇಲೆ ಕೈ ಮಾಡಿ ಅವರು ಮನೆಯಿಂದ ಹೊರಕ್ಕೆ ಹೊಗಿದ್ದರು. ಆ ಬಳಿಕ ವೆಂಕಟ್ ಅವರು ಊರೂರು ಅಲೆದಿದ್ದರು. ಅವರಿಗೆ ಮಾನಸಿಕ ಚಿಕಿತ್ಸೆಯ ಅವಕಾಶ ಇದೆ ಎಂದು ಎಲ್ಲರೂ ಹೇಳಿದ್ದರು. ಈಗ ಅವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ‘ನನಗೆ ಮತ್ತೊಂದು ಅವಕಾಶ ಕೊಡಿ. ಕೊಡುವ ಎಲ್ಲಾ ಟಾಸ್ಕ್​ಗಳನ್ನು ಮಾಡುತ್ತೇನೆ’ ಎಂದಿದ್ದಾರೆ ಹುಚ್ಚ ವೆಂಕಟ್.