Back to Top

'ಬಿಗ್ ಬಾಸ್ ಕನ್ನಡ ಸೀಸನ್ 11' ಸ್ಪರ್ಧಿಗಳ ಫೋಟೋ ಲೀಕ್

SSTV Profile Logo SStv September 26, 2024
ಸ್ಪರ್ಧಿಗಳ ಫೋಟೋ ಲೀಕ್
ಸ್ಪರ್ಧಿಗಳ ಫೋಟೋ ಲೀಕ್
'ಬಿಗ್ ಬಾಸ್ ಕನ್ನಡ ಸೀಸನ್ 11' ಸ್ಪರ್ಧಿಗಳ ಫೋಟೋ ಲೀಕ್ 'ಬಿಗ್ ಬಾಸ್ ಕನ್ನಡ ಸೀಸನ್ 11' ಗೆ ದಿನಗಣನೆ ಆರಂಭವಾಗಿದೆ, ಸೆಪ್ಟೆಂಬರ್ 29ರಂದು ಅದ್ದೂರಿ ಓಪನಿಂಗ್​​ ಆಗಲಿದೆ. ಈ ಬಾರಿ 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸೋ ನಿರೀಕ್ಷೆ ಇದೆ. ವಿಶೇಷವೆಂದರೆ, ಸ್ಪರ್ಧಿಗಳ ಫೋಟೋಗಳು ಈಗಾಗಲೇ ಲೀಕ್ ಆಗಿದ್ದು, ಕಲರ್ಸ್ ಕನ್ನಡವು ಬ್ಲರ್ ಫೋಟೋಗಳನ್ನು ಶೇರ್ ಮಾಡಿದೆ, ಇದರಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. 'ಬಿಗ್ ಬಾಸ್' ಕಾರ್ಯಕ್ರಮದ ಹೊಸ ಪ್ರೋಮೋದಲ್ಲಿ ಸ್ಪರ್ಧಿಗಳ ಬ್ಲರ್ ಚಿತ್ರಗಳು ತೋರಿಸಲಾಗಿದ್ದು, ಯಾರವರು ಎಂಬುದರ ಕುರಿತು ಊಹಾಪೋಹಗಳು ನಡೆಯುತ್ತಿವೆ. ಈ ಬಾರಿ 'ನರಕ ಮತ್ತು ಸ್ವರ್ಗ' ಎಂಬ ವಿಶೇಷ ಕಾನ್ಸೆಪ್ಟ್​​ನಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದ್ದು, ಕಿಚ್ಚ ಸುದೀಪ್ ಹೋಸ್ಟ್ ಆಗಿದ್ದಾರೆ.