45 ಸಿನಿಮಾ ಲಕ್ಕಿ ನಂಬರ್ 9 ಶಿವಣ್ಣನ ಭವಿಷ್ಯ ನುಡಿ
ಸೂಪರ್‌ಸ್ಟಾರ್‌ಗಳ 45 ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, 40 ದಿನಗಳ ಕ್ಲೈಮ್ಯಾಕ್ಸ್ ಶೂಟಿಂಗ್ ಈಗೇ ಮುಗಿದಿದೆ. ಈ ಮಹತ್ವದ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿದ್ದು, ಉಪೇಂದ್ರ, ಶಿವರಾಜ್ ಕುಮಾರ್, ಮತ್ತು ರಾಜ್ ಬಿ ಶೆಟ್ಟಿ ಸಖತ್ ಫೈಟ್ ಸೀಕ್ವೆನ್ಸ್‌ಗಳಲ್ಲಿ ಭಾಗವಹಿಸಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮ ಈ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.
ಶಿವರಾಜ್ ಕುಮಾರ್ ಸಿನಿಮಾದ ಬಗ್ಗೆ ಭವಿಷ್ಯ ನುಡಿಯುತ್ತಾ, ಇದು ಹಿಟ್ ಗ್ಯಾರಂಟಿ ಅಂತ ಹೇಳಿದ್ದಾರೆ. 4 + 5 = 9, ಇದು ಲಕ್ಕಿ ನಂಬರ್ ಎಂದು ಅವರು ಸಿನಿಮಾದ ಗೆಲುವು ಕಮೆಂಟ್ ಮಾಡಿದ್ದಾರೆ.
ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಸಿನಿಮಾ ತ್ರಿಮೂರ್ತಿಗಳಾಗಿ ಶಿವಣ್ಣ, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿಯನ್ನು ನಿರ್ದೇಶಕ ಅರ್ಜುನ್ ಜನ್ಯ ಬಣ್ಣಿಸಿದ್ದಾರೆ. ಚಿತ್ರತಂಡದ ಪ್ರಕಾರ, ಮೂವರು ಸ್ಟಾರ್‌ಗಳ ಅಭಿಮಾನಿಗಳಿಗೆ ಖುಷಿ ತರುವಂತಹ ಚಿತ್ರ ಇದು.
ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯವರಿಗೆ ಕೌಸ್ತುಭ ಮಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಎಲ್ಲಾ ಶೂಟಿಂಗ್ ಕಾರ್ಯ ಮುಗಿದಿದ್ದು, ಚಿತ್ರವು ದೊಡ್ಡ ಸಕ್ಸಸ್ ಆಗಲಿದೆ ಎಂದು ಭಾ