ತೀವ್ರ ಬೆನ್ನು ನೋವು ಸರ್ಜರಿ ಆಗದಿದ್ದರೆ ದರ್ಶನ್ಗೆ ಅಪಾಯ


ತೀವ್ರ ಬೆನ್ನು ನೋವು ಸರ್ಜರಿ ಆಗದಿದ್ದರೆ ದರ್ಶನ್ಗೆ ಅಪಾಯ ದರ್ಶನ್ ಒಂದಲ್ಲ, ಎರಡಲ್ಲ 9 ವರ್ಷಗಳಿಂದ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಜೈಲಲ್ಲಿ ನಟನಿಗೆ ತೀವ್ರವಾಗಿದೆ ಬೆನ್ನು ನೋವು, ಚಿಕಿತ್ಸೆ ಕೊಡಿಸದಿದ್ದರೆ ಅಪಾಯ?ಸ್ಯಾಂಡಲ್ವುಡ್ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗ ತಕ್ಕಮಟ್ಟಿಗೆ ಆರೋಗ್ಯವಾಗಿಯೇ ಇದ್ದರು. ಆದರೆ ಬಳ್ಳಾರಿಗೆ ಶಿಫ್ಟ್ ಆದ ನಂತರ ನಟ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಗೆ ತೀವ್ರ ಬೆನ್ನುನೋವು ಹಿನ್ನಲೆಯಲ್ಲಿ 9 ವರ್ಷಗಳಿಂದಲೂ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು ಸರ್ಜರಿಗೆ ಒಳಗಾಗದೇ ಇದ್ದರೆ ದರ್ಶನ್ ಗೆ ಅಪಾಯ ಆಗಲಿದೆಯಾ ಎನ್ನುವ ಚರ್ಚೆ ಶುರುವಾಗಿದೆ. ದರ್ಶನ್ ಬೆನ್ನುನೋವು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ದಾಖಲಿಸಿದ ವರದಿಯಲ್ಲಿ ಹಲವು ಮಾಹಿತಿ ಉಲ್ಲೇಖಿಸಲಾಗಿದೆ.ಬಿಮ್ಸ್ ಆರ್ಥೋ ವಿಭಾಗದ ಮುಖ್ಯಸ್ಥ ಡಾ ವೇಂಕಟೇಶಲು ನೇತೃತ್ವದಲ್ಲಿ ದರ್ಶನ್ ತಪಾಸಣೆ ಮಾಡಲಾಗಿದ್ದು ಬೆನ್ನುನೋವು ಬಗ್ಗೆ ಇತ್ತೀಚಿಗೆ ಜೈಲಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿತ್ತು. ಎಂಆರ್ ಐ ಶಿಫಾರಸ್ಸು ಮಾಡಿದ್ದ ವೈದ್ಯರ ಸಲಹೆ ನಿರಾಕರಿಸಿದ್ದ ದರ್ಶನ್ ಬೆಂಗಳೂರಿನಲ್ಲಿಯೇ ತೋರಿಸುವುದಾಗಿ ಹೇಳಿದ್ದರು.
ಹಳೆಯ ವೈದ್ಯಕೀಯ ದಾಖಲಾತಿ ಪರಿಶೀಲಿಸಿದ್ದ ಬಿಮ್ಸ್ ವೈದ್ಯರ ತಂಡ ಈಗ ದರ್ಶನ್ ಬೆನ್ನು ಮುಳೆಯ ಸ್ಥಿತಿ ಗಮನಿಸಿದ ಬಿಮ್ಸ್ ವೈದ್ಯರು ಶೀಘ್ರ ಸರ್ಜರಿ ಅವಶ್ಯಕತೆ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಒಂದು ವರದಿ ಇನ್ನೂ ಜೈಲಾಧಿಕಾರಿಗಳ ಕೈಗೆ ತಲುಪಿಲ್ಲ.ನಿರ್ಲಕ್ಷ್ಯ ಮಾಡಿದರೆ ಮತ್ತಷ್ಟು ಬೆನ್ನುನೋವು ಉಲ್ಬಣವಾಗುವ ಬಗ್ಗೆ ತಿಳಿಸಿರುವ ವೈದ್ಯರು ವರದಿ ಶೀಘ್ರ ಜೈಲು ಅಧಿಕಾರಿಗಳ ಕೈ ಸೇರಲಿದೆ. ಜೈಲು ಸೇರಿದ ಬಳಿಕ ನಾಲ್ಕು ತಿಂಗಳಿಂದ ನಟ ದರ್ಶನ್ ಚಿಕಿತ್ಸೆ ಪಡೆದಿಲ್ಲ. ದರ್ಶನ್ ಬೆಡ್ ಇಲ್ಲದೇ ಚಾಪೆಯ ಮೇಲೆ ಮಲಗುವ ಕಾರಣ ಅವರ ಮತ್ತಷ್ಟು ಬೆನ್ನುನೋವು ಉಲ್ಬಣವಾಗಿದೆಯಾ ಎನ್ನಲಾಗಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
