ಯುವ ರಾಜ್‌ಕುಮಾರ್‌ಗೆ ರೋಹಿತ್ ಪದಕಿ ಆ್ಯಕ್ಷನ್ ಕಟ್ 'ಯುವ' ಚಿತ್ರದ ಮೂಲಕ ಯುವ ರಾಜ್‌ಕುಮಾರ್ ತಮ್ಮ ಅದ್ಭುತ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಅವರ ಮುಂದಿನ ಯೋಜನೆ ಕುರಿತಾಗಿ ಬಹುದಿನದ ನಿರೀಕ್ಷೆ ಇತ್ತು. ಇದೀಗ, ಯುವ ರಾಜ್‌ಕುಮಾರ್ ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕ ರೋಹಿತ್ ಪದಕಿ ಅವರೊಂದಿಗೆ ಮಾಡುತ್ತಿದ್ದಾರೆಂದು ಘೋಷಿಸಿದ್ದಾರೆ.
ಈ ಹೊಸ ಚಿತ್ರಕ್ಕೆ 'ಎಕ್ಕ ರಾಜ ರಾಣಿ' ಎಂಬ ಶೀರ್ಷಿಕೆ ಸಾಧ್ಯತೆಯಿದ್ದು, ನಿರ್ಮಾಣದ ಹೊಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವಹಿಸಿದ್ದಾರೆ. ಚಿತ್ರದ ಇನ್ನೂಳಿದ ತಂಡದ ಘೋಷಣೆಯನ್ನು ದಸರಾ ಹಬ್ಬದಂದು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. "ರತ್ನನ್ ಪ್ರಪಂಚ" ನಿರ್ದೇಶಕನ ಜೊತೆ ಯುವನ ಹೊಸ ಯೋಜನೆ ಕುರಿತಾಗಿ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.