Back to Top

ಬಾಲಿವುಡ್ ಟೀಕೆ ರಿಷಬ್ ಶೆಟ್ಟಿಯಿಂದ ಸ್ಪಷ್ಟನೆ

SSTV Profile Logo SStv September 28, 2024
ರಿಷಬ್ ಶೆಟ್ಟಿಯಿಂದ ಸ್ಪಷ್ಟನೆ
ರಿಷಬ್ ಶೆಟ್ಟಿಯಿಂದ ಸ್ಪಷ್ಟನೆ
ಬಾಲಿವುಡ್ ಟೀಕೆ: ರಿಷಬ್ ಶೆಟ್ಟಿಯಿಂದ ಸ್ಪಷ್ಟನೆ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಾಲಿವುಡ್ ಕುರಿತ ಹೇಳಿಕೆ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಾಲಿವುಡ್ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸುತ್ತವೆ ಎಂಬ ಸಂದರ್ಶನದಲ್ಲಿ ಅವರ ಮಾತುಗಳು ಸುದ್ದಿಯಾಗಿದ್ದವು. ಆದರೆ, ಐಐಎಫ್​ಎ 2024 ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಶೀಘ್ರದಲ್ಲೇ ಈ ಕುರಿತು ಸವಿವರ ವಿವರಣೆ ನೀಡುವೆ ಎಂದು ಅವರು ತಿಳಿಸಿದರು. ಅವರು ‘ಕಾಂತಾರ’ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.