Back to Top

ಶಶಿಕುಮಾರ್ ಪುತ್ರನ ಮೂರನೇ ಸಿನಿಮಾ ‘ರಾಶಿ’

SSTV Profile Logo SStv September 21, 2024
‘ರಾಶಿ’ ಸಿನಿಮಾ
‘ರಾಶಿ’ ಸಿನಿಮಾ
ಶಶಿಕುಮಾರ್ ಪುತ್ರನ ಮೂರನೇ ಸಿನಿಮಾ ‘ರಾಶಿ’ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ (ಹಳೆಯ ಹೆಸರು ಅಕ್ಷಿತ್) ನಟನಾಗಿ ಗುರುತಿಸಿಕೊಳ್ಳುತ್ತಿರುವ ಮೂರನೇ ಸಿನಿಮಾ ‘ರಾಶಿ’ಯ ಶೀರ್ಷಿಕೆ ಅನಾವರಣಗೊಂಡಿದೆ. ಧುವನ್ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿತವಾಗುತ್ತಿರುವ ಈ ಲವ್‌ಸ್ಟೋರಿ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣವನ್ನು ರಾಜ್ಯಸಭಾ ಸದಸ್ಯ ಜಿ.ಎಸ್. ಚಂದ್ರಶೇಖರ್, ಬೆಂಗಳೂರು ಡಿಸಿಪಿ ಸಿದ್ದರಾಜು, ಹಾಗೂ ಇತರ ಗಣ್ಯರು ನೆರವೇರಿಸಿದರು. ನಟ ಆದಿತ್ಯ, ಈ ಹೊಸ ಹೆಸರಿನಲ್ಲಿ ನಟನೆ ಜೀವನದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದು, ಸಿನಿಮಾದಿಂದ ಭಾರಿ ನಿರೀಕ್ಷೆ ಹೊಂದಿದ್ದಾರೆ.