ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ‘ರಾಚಯ್ಯ’ನಾದ ಭೀಮ
ದುನಿಯಾ ವಿಜಯ್ ಅವರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ‘ರಾಚಯ್ಯ’ ಎಂಬ ನಾಮಕರಣ ಮಾಡಲಾಗಿದೆ. 12 ವರ್ಷಗಳ ಬಳಿಕ ಸಾರಥಿ ಫಿಲಂಸ್ ಮೂಲಕ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರ ಪುತ್ರ ಸೂರಜ್ ಗೌಡ ಸಹ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಜಡೇಶ ಕೆ. ಹಂಪಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ಅವರ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಸಿನಿಮಾ 90ರ ದಶಕದ ಕೋಲಾರ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ನಿರ್ದೇಶಕ ಜಡೇಶ್ ಅವರು ಈ ಸಿನಿಮಾ "ಚೋಮನ ದುಡಿ"ಯ ಚೋಮನ ಪಾತ್ರದಿಂದ ಪ್ರೇರಿತ ಎಂದು ಹೇಳಿದ್ದು, ಆದರೆ ಆ ಕಥೆಗೆ ಈ ಚಿತ್ರದೊಂದಿಗೆ ನೇರ ಸಂಬಂಧವಿಲ್ಲವೆಂದಿದ್ದಾರೆ.
ದುನಿಯಾ ವಿಜಯ್ ತಮ್ಮ ಮಗಳ ಚಲನಚಿತ್ರ ಪ್ರವೇಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.