Back to Top

ಬಿಗ್ ಬಾಸ್​ ಕನ್ನಡ 11 ಪ್ರಥಮ್​ನ ಕಿವಿಮಾತು ಸ್ಪರ್ಧಿಗಳಿಗೆ

SSTV Profile Logo SStv September 27, 2024
ಪ್ರಥಮ್​ನ ಕಿವಿಮಾತು ಸ್ಪರ್ಧಿಗಳಿಗೆ
ಪ್ರಥಮ್​ನ ಕಿವಿಮಾತು ಸ್ಪರ್ಧಿಗಳಿಗೆ
ಬಿಗ್ ಬಾಸ್​ ಕನ್ನಡ 11 ಪ್ರಥಮ್​ನ ಕಿವಿಮಾತು ಸ್ಪರ್ಧಿಗಳಿಗೆ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿ ಸ್ಪರ್ಧಿಗಳಿಗೆ ಮಾಜಿ ವಿನ್ನರ್ ಪ್ರಥಮ್ ತಮ್ಮ ಅನುಭವದಿಂದ ಕಿವಿಮಾತು ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 4 ವಿನ್ನರ್ ಆಗಿ ಖ್ಯಾತಿಗೆ ಬಂದ ಪ್ರಥಮ್, "ನಮ್ಮವರಲ್ಲದ ಜನಗಳ ನಡುವೆ ನಮ್ಮತನ ಉಳಿಸಿಕೊಳ್ಳುವುದೇ ಬಿಗ್ ಬಾಸ್‌" ಎಂದಿದ್ದಾರೆ. ಪ್ರಥಮ್ ಅವರು ಬಿಗ್ ಬಾಸ್ ತನ್ನ ಜೀವನದ ದೊಡ್ಡ ಆಧಾರಶಿಲೆಯಾಗಿದೆ ಎಂದು ಹೇಳಿ, ಸ್ಪರ್ಧಿಗಳಿಗೆ ವೈಖರಿ ಮತ್ತು ವ್ಯಕ್ತಿತ್ವದ ಮೂಲಕ ಕನ್ನಡಿಗರ ಮನ ಗೆಲ್ಲುವ ಸಲಹೆ ನೀಡಿದ್ದಾರೆ. ಈ ವರ್ಷ, ಬಿಗ್ ಬಾಸ್ ಮನೆ ಸ್ವರ್ಗ ಮತ್ತು ನರಕ ಎಂಬ ಎರಡು ವಿಭಾಗಗಳಲ್ಲಿ ವಿಭಜಿತವಾಗಿದ್ದು, ಪ್ರೇಕ್ಷಕರ ಪಾತ್ರವೂ ಮಹತ್ವದಾಗಿದೆ. ಸ್ಪರ್ಧಿಗಳು ಕಾದು ಕುಳಿತಿರುವ ಈ ಶೋ, ಸೆಪ್ಟೆಂಬರ್ 29ರಂದು ಪ್ರಾರಂಭವಾಗಲಿದೆ.