ಪ್ರಕರಣ ತನಿಖಾ ಹಂತದಲ್ಲಿದೆ ಡ್ರಗ್ಸ್ ಮಾಫಿಯಾ ಕುರಿತು ಚಿಕ್ಕದಾದ, ಚೊಕ್ಕದಾದ ಸಿನಿಮಾ


ಪ್ರಕರಣ ತನಿಖಾ ಹಂತದಲ್ಲಿದೆ ಡ್ರಗ್ಸ್ ಮಾಫಿಯಾ ಕುರಿತು ಚಿಕ್ಕದಾದ, ಚೊಕ್ಕದಾದ ಸಿನಿಮಾ ಡ್ರಗ್ಸ್ ಮಾಫಿಯಾ ಮತ್ತು ಸರಣಿ ಕೊಲೆಗಳ ಸಸ್ಪೆನ್ಸ್ ಕಥೆಯನ್ನು ಒಳಗೊಂಡಿರುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ, ಚಿಕ್ಕದಾಗಿ, ಚೊಕ್ಕವಾಗಿ ಮೂಡಿಬಂದಿದೆ. ಸುಂದರ್ ಎಸ್. ನಿರ್ದೇಶನದ ಈ ಚಿತ್ರ, 95 ನಿಮಿಷಗಳಲ್ಲಿ ಮುಖ್ಯ ಕಥಾಹಂದರವನ್ನು ಸ್ಪಷ್ಟವಾಗಿ ಹೇಳುತ್ತದೆ.
ಈ ಚಿತ್ರದಲ್ಲಿ ಡ್ರಗ್ಸ್ ಜಾಲದ ಹಿನ್ನಲೆಯಲ್ಲಿ ಅನೇಕ ಕೊಲೆಗಳು ನಡೆಯುತ್ತವೆ. ಕೊಲೆಗಾರನನ್ನು ಪತ್ತೆಹಚ್ಚುವ ಉತ್ಸುಕುತೆಯಿಂದ ಪ್ರೇಕ್ಷಕರನ್ನು ಹಿಡಿದಿಡುವ ಕಥೆಯು, ಅನಗತ್ಯ ದೃಶ್ಯಗಳಿಲ್ಲದೆ ಸರಳವಾಗಿ ಸಾಗುತ್ತದೆ. ಮಾಹಿನ್ ಕುಬೇರ್, ಚಿಂತನ್ ಕಂಬಣ್ಣ ಮತ್ತು ರಾಜ್ ಗಗನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಕಥೆಯ ಚುರುಕಿನ ನಿರೂಪಣೆ. ಮಾದಕ ದ್ರವ್ಯಗಳ ಬಗ್ಗೆ ಎಚ್ಚರಿಕೆ ಸಂದೇಶ ನೀಡಲು ಈ ಚಿತ್ರ ಯಶಸ್ವಿ ಪ್ರಯತ್ನ ಮಾಡಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
