Back to Top

ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ, ಇಂದು ನಡೆದ ವಾದವೇನು

SSTV Profile Logo SStv September 27, 2024
ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ
ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ
ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ, ಇಂದು ನಡೆದ ವಾದವೇನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಸೆಪ್ಟೆಂಬರ್ 27) ಬೆಂಗಳೂರು ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು, ಆದರೆ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಪವಿತ್ರಾ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿ, "ಪವಿತ್ರಾ ಅವರಿಗೆ ಕೊಲ್ಲುವ ಉದ್ದೇಶ ಇರಲಿಲ್ಲ, ಮತ್ತು ಅವರು ಈ ಪ್ರಕರಣದಲ್ಲಿ ಷಡ್ಯಂತ್ರ ಮಾಡಿಲ್ಲ" ಎಂದು ನ್ಯಾಯಾಲಯದಲ್ಲಿ ಹೇಳಿದರು. ಪವಿತ್ರಾ ಅವರ ಕಪಾಳಕ್ಕೆ ಹೊಡೆದಿದ್ದರೂ, ಇದರ ಹೊರತಾಗಿ ಆಕೆಯ ಯಾವುದೇ ಪ್ರಮುಖ ಪಾತ್ರ ಇಲ್ಲ ಎಂದು ವಾದಿಸಿದರು. ಇದೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಂಟನೇ ಆರೋಪಿ ರವಿ ಅಲಿಯಾಸ್ ರವಿಶಂಕರ್ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಿತು. ರವಿಶಂಕರ್ ಪರ ವಾದಿಸಿದ ವಕೀಲ ರಂಗನಾಥ ರೆಡ್ಡಿ, ರೇಣುಕಾಸ್ವಾಮಿ ಅಪಹರಣ, ಕೊಲೆಯಲ್ಲಿ ರವಿಶಂಕರ್ ಪಾತ್ರವಿಲ್ಲ, ಕಾರು ಬಾಡಿಗೆಗೆ ತೆಗೆದುಕೊಂಡಿದ್ದು ಬಿಟ್ಟರೆ ಘಟನೆ ಬಗ್ಗೆ ಗೊತ್ತಿಲ್ಲ, ಅಪಹರಣದ ಷಡ್ಯಂತ್ರದಲ್ಲೂ ಪಾತ್ರವಿಲ್ಲ, ಕೊಲೆಯಲ್ಲೂ ರವಿಶಂಕರ್ ಇಲ್ಲ, ರವಿಶಂಕರ್ ಕಾರು ಚಾಲಕನಾಗಿ ತನ್ನ ಕಾರನ್ನು ಬಾಡಿಗೆಗೆ ನೀಡಿದ್ದ, ಸೆಕ್ಷನ್ 364 ಆಗಲೀ, 302 ಆಗಲೀ ಅನ್ವಯವಾಗಲ್ಲವೆಂದು ವಾದ ಮಂಡಿಸಿದರು. ಇಬ್ಬರೂ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದರು.