ವೈಷ್ಣವಿ ಗೌಡ – ಪತಿಯ ಮಾತಿಗೆ 117 ಅಡಿ ಎತ್ತರದಿಂದ ಜಿಗಿದ ಧೈರ್ಯಶಾಲಿ ನಟಿ!
SStv
June 24, 2025
ಕನ್ನಡದ ಜನಪ್ರಿಯ ಟಿವಿ ನಟಿ ವೈಷ್ಣವಿ ಗೌಡ ತಮ್ಮ ವೈವಾಹಿಕ ಜೀವನವನ್ನು ಖುಷಿಯಿಂದ ಪತಿ ಅನಕೂಲ್ ಮಿಶ್ರಾ ಜೊತೆಗೆ ಅಮೂಲ್ಯವಾದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ವೈಷ್ಣವಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶಾಕ್ ನೀಡುವಂತಹ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್ 117 ಅಡಿ ಎತ್ತರದಿಂದ ಕೆಳಗೆ ಜಿಗಿದ ದೃಶ್ಯವಿದೆ! “ಪ್ರತಿ ಸೆಕೆಂಡ್‌ಗೆ ಯೋಗ್ಯವಾಗಿದೆ. ನನ್ನ ಪತಿ ಹೀಗೆ ಮಾಡಬೇಕೆಂದು ಹೇಳಿದರು” ಎಂಬ ಮಾತುಗಳೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಸಾಹಸ ನೋಡಿದ ತಕ್ಷಣವೂ ಚಿಂತೆಗೊಂಡು, ನಂತರ ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮತ್ತು ಮದುವೆ ಸಂಭ್ರಮದಲ್ಲಿದ್ದ ವೈಷ್ಣವಿ, ಈಗ ಪತಿಯೊಂದಿಗೆ ರೋಮ್ಯಾಂಟಿಕ್ ಲೈಫ್‌ನ ಆನಂದದಲ್ಲಿ ಮುದ್ದಾಗಿದ್ದಾರೆ.
