Back to Top

ಪಂಚಭೂತಗಳಲ್ಲಿ ಲೀನರಾದ ಸುದೀಪ್ ತಾಯಿ

SSTV Profile Logo SStv October 21, 2024
ಪಂಚಭೂತಗಳಲ್ಲಿ ಲೀನರಾದ ಸುದೀಪ್ ತಾಯಿ
ಪಂಚಭೂತಗಳಲ್ಲಿ ಲೀನರಾದ ಸುದೀಪ್ ತಾಯಿ
ಪಂಚಭೂತಗಳಲ್ಲಿ ಲೀನರಾದ ಸುದೀಪ್ ತಾಯಿ ನಟ ಸುದೀಪ್ ತಾಯಿ ಸರೋಜ ಅವರು ಇಂದು (ಅ.20) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ಇಂದು (ಅ.20) ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಸುದೀಪ್ ನೆರವೇರಿಸಿದ್ದಾರೆ. ಕಾರ್ಯ ಮಾಡುವಾಗ, ಸುದೀಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸುದೀಪ್ ಯಶಸ್ಸಿನ ಹಿಂದೆ ತಾಯಿಯ ಪಾತ್ರವಿತ್ತು. ಅಮ್ಮನ ಜೊತೆ ಉತ್ತಮ ಒಡನಾಟ ಹೊಂದಿದ್ದ ಸುದೀಪ್‌ಗೆ ಅವರ ನಿಧನ ಆಘಾತವುಂಟು ಮಾಡಿದೆ. ಅಗಲಿದ ಅಮ್ಮನಿಗೆ ಸುದೀಪ್ ಕಣ್ಣೀರಿನ ವಿದಾಯ ಹೇಳಿದ್ದಾರೆ.ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.