Back to Top

‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ

SSTV Profile Logo SStv October 14, 2024
ನಿರ್ದೇಶಕ ಚಿ.ದತ್ತರಾಜ್ ನಿಧನ
ನಿರ್ದೇಶಕ ಚಿ.ದತ್ತರಾಜ್ ನಿಧನ
ಕೆರಳಿದ ಸಿಂಹ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ ಜನಪ್ರಿಯ ಸಾಹಿತಿಗಾರ ಚಿ.ಉದಯಶಂಕರ್ ಅವರ ಸಹೋದರ ನಿರ್ದೇಶಕ ಚಿ.ದತ್ತರಾಜ್ ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್‌ಗೆ 87 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇನ್ನೂ ಇಂದು ಮಧ್ಯಾಹ್ನ 1:30ಕ್ಕೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಂದಹಾಗೆ, ಡಾ.ರಾಜಕುಮಾರ್ ಅಭಿನಯದ ಕೆರಳಿದ ಸಿಂಹ ,ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ ಚಿತ್ರ ನಿರ್ದೇಶಿಸಿದ್ದರು. ಶಿವರಾಜಕುಮಾರ್ ನಟನೆಯ ಮೃತ್ಯುಂಜಯ, ಆನಂದ ಜ್ಯೋತಿ ಸೇರಿದಂತೆ ಮಂಜುಳ ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.