Back to Top

ನಟ ದರ್ಶನ್‌ ಆರೋಗ್ಯದಲ್ಲಿ ಸುಧಾರಣೆ ಎಂಆರ್‌ಐ ಸ್ಕ್ಯಾನ್‌ಗೆ ಒಪ್ಪಿಗೆ

SSTV Profile Logo SStv October 21, 2024
ನಟ ದರ್ಶನ್‌ ಆರೋಗ್ಯದಲ್ಲಿ ಸುಧಾರಣೆ
ನಟ ದರ್ಶನ್‌ ಆರೋಗ್ಯದಲ್ಲಿ ಸುಧಾರಣೆ
ನಟ ದರ್ಶನ್‌ ಆರೋಗ್ಯದಲ್ಲಿ ಸುಧಾರಣೆ ಎಂಆರ್‌ಐ ಸ್ಕ್ಯಾನ್‌ಗೆ ಒಪ್ಪಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 130 ದಿನಗಳಿಂದ ಜೈಲಿನಲ್ಲಿ ಇರುವ ನಟ ದರ್ಶನ್, ತಮ್ಮ ತೀವ್ರ ಬೆನ್ನುನೋವಿನ ಸಮಸ್ಯೆಗಾಗಿ ಕೊನೆಗೂ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಪ್ಪಿಗೆ ನೀಡಿದ್ದಾರೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಲಾಗುವುದು. ಪೋಷಕರು ಮತ್ತು ಜೈಲಾಧಿಕಾರಿಗಳೊಂದಿಗೆ ಚರ್ಚಿಸಿ, ದರ್ಶನ್ ತೀವ್ರ ನೋವು ಹಿನ್ನಲೆಯಲ್ಲಿ ಫಿಸಿಯೋಥೆರಪಿ ತಕ್ಕ ಮಟ್ಟಿಗೆ ಫಲಿತಾಂಶ ನೀಡದ ಕಾರಣ, ಅವರು ವೈದ್ಯರ ಸಲಹೆಯನ್ನು ಅನುಸರಿಸಲು ನಿರ್ಧರಿಸಿದ್ದಾರೆ. ಇದೀಗ, ಅಕ್ಟೋಬರ್ 22ರಂದು ಸ್ಕ್ಯಾನ್ ಸಂಬಂಧ ಭದ್ರತಾ ವ್ಯವಸ್ಥೆ ಮತ್ತು ದಿನಾಂಕವನ್ನು ದೃಢಪಡಿಸಲಾಗುವುದು.