ಯಶ್‌ನ ಬೆಳ್ಸಿದ್ದೇ ನಾನು, ಆದ್ರೆ ಕೊನೆಗೆ ಏನಂದುಬಿಟ್ಟ ಗೊತ್ತಾ? ಮೈಸೂರು ನಾಗರಾಜ್ ಬೇಸರ


ರಾಕಿಂಗ್ ಸ್ಟಾರ್ ಯಶ್ ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡದ ಮೆಗಾಸ್ಟಾರ್. ಬಸ್ ಡ್ರೈವರ್ ಮಗನಾಗಿ ಬಂದ ಯಶ್, ಶ್ರಮ, ಪ್ರತಿಭೆ ಮತ್ತು ಅದೃಷ್ಟದ ಬಲದಿಂದ ಇಂದಿನ ಹಂತಕ್ಕೆ ತಲುಪಿದ್ದಾರೆ. ಕೆಜಿಎಫ್ ಸಿನಿಮಾದ ನಂತರ ಯಶ್ ಪ್ಯಾನ್ ಇಂಡಿಯಾ ಮಾತ್ರವಲ್ಲ, ಹಾಲಿವುಡ್ ಮಟ್ಟಕ್ಕೂ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಈಗ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ.
ಆದರೆ, ಈ ಯಶಸ್ಸಿನ ಹಿಂದೆ ಹಲವರ ಬೆಂಬಲವಿದೆ. ಅದರಲ್ಲಿ ಒಬ್ಬರು ಮೈಸೂರು ನಾಗರಾಜ್. ಇತ್ತೀಚೆಗೆ ಅವರು ಯಶ್ ಬಗ್ಗೆ ಬೇಸರದ ಭಾವನೆ ಹಂಚಿಕೊಂಡಿದ್ದಾರೆ.
ಯಶ್‌ಗೆ ಮೊದಲ ಅವಕಾಶ ನೀಡಿದವರು ನಾಗರಾಜ್, ನಾಗರಾಜ್ ಅವರು ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಕಾಲದಲ್ಲಿ ಯಶ್ (ಅಂದಿನ ನವೀನ್ ಗೌಡ) ಅವರನ್ನು ನಂದಗೋಕುಲ ಧಾರಾವಾಹಿಯಲ್ಲಿ ಭೇಟಿಯಾದರು. ಯಶ್ ತಮ್ಮ ಫೋಟೋ, ಫೋನ್ ನಂಬರ್ ನೀಡಿ ಸಿನಿಮಾಗಳಲ್ಲಿ ಅವಕಾಶ ಕೊಡಿಸುವಂತೆ ಕೇಳಿಕೊಂಡಿದ್ದರು. ಎರಡು ವರ್ಷಗಳ ಕಾಲ ನಿರ್ಮಾಪಕರನ್ನು ಹುಡುಕಿ ಕೊನೆಗೆ ಪ್ರಿಯಾ ಹಾಸನ್ ಅವರ ಜಂಭದ ಹುಡುಗಿ ಸಿನಿಮಾದಲ್ಲಿ ಯಶ್‌ಗೆ ಮೊದಲ ಅವಕಾಶ ಸಿಕ್ಕಿತು. ಈ ಚಿತ್ರ ಯಶ್‌ಗಾಗಿ ಬಾಗಿಲು ತೆರೆಸಿದರೂ, ದೊಡ್ಡ ಬ್ರೇಕ್ ನೀಡಿದ್ದು ಮೊಗ್ಗಿನ ಮನಸು.
ನಾಗರಾಜ್ ಅವರ ಪ್ರಕಾರ, ಯಶ್ ಅವರೊಂದಿಗೆ ಮೊದಲ ಭೇಟಿ ವೇಳೆ ತುಂಬಾ ಮೃದುವಾಗಿ ಮಾತನಾಡಿದ್ದರು. ಆದರೆ, ಮತ್ತೆ ಭೇಟಿ ಮಾಡಿದಾಗ ಅವರ ಪ್ರತಿಕ್ರಿಯೆ ಬದಲಾಗಿತ್ತಂತೆ. “ಒಮ್ಮೆ ಸಿನಿಮಾ ಮಾಡೋಣ ಸರ್” ಎಂದಾಗ, ಯಶ್ “ನನ್ನ ರೇಂಜ್ ಏನು ಗೊತ್ತಾ ಸರ್?” ಎಂದು ಉತ್ತರಿಸಿದ್ರು ಎಂದು ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಶ್ ಅವರ ತಾಯಿ ಪುಷ್ಪಾ ಇತ್ತೀಚೆಗೆ “ಯಶ್ ಸ್ವಂತ ಶ್ರಮದಿಂದ ಬೆಳೆದವರು, ಯಾರ ಸಹಾಯ ಇಲ್ಲದೇ ಇಂದಿನ ಹಂತಕ್ಕೇರಿದ್ದಾರೆ” ಎಂದು ಹೇಳಿದ್ರು. ಈ ಮಾತುಗಳೇ ನಾಗರಾಜ್ ಅವರಿಗೆ ನೋವು ತಂದಂತೆ. “ನನಗೆ ಯಾವುದೇ ಕ್ರೆಡಿಟ್ ಬೇಡ. ಆದರೆ ‘ಯಾರೂ ಸಹಾಯ ಮಾಡಿಲ್ಲ’ ಅನ್ನೋ ಮಾತು ತಪ್ಪು. ಯಶ್ ಹತ್ತಿದ ಏಣಿಯನ್ನು ಒದ್ದಿದ್ದಾರೆ” ಎಂದು ಅವರು ಹೇಳಿದ್ದಾರೆ.
ಯಶ್ ವಿರುದ್ಧ ಅಸಮಾಧಾನವಿದ್ದರೂ, ನಾಗರಾಜ್ ಅವರು ನಟನ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. “ನಾನು ನಿರ್ದೇಶಕನಾಗದೇ ಹೋದರೂ, ಯಶ್ ಹೀರೋ ಆಗಲು ಸಹಾಯ ಮಾಡಿದ್ದೇನೆ. ಅವನು ಹಂತ ಹಂತವಾಗಿ ಬೆಳೆದು ಬಂದಿದ್ದಾನೆ, ಅದನ್ನು ನಾನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
