ಮಾರ್ಟಿನ್ ಸಿನಿಮಾ ಮೂರು ದಿನದ ಕಲೆಕ್ಷನ್ 16 ಕೋಟಿ ರೂ


ಮಾರ್ಟಿನ್ ಸಿನಿಮಾ ಮೂರು ದಿನದ ಕಲೆಕ್ಷನ್ 16 ಕೋಟಿ ರೂ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಎರಡು ವಾರದ ಕಾದು, ದಸರಾ ಸಂದರ್ಭದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಕನ್ನಡ ಮಾತ್ರವಲ್ಲ, ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ‘ಮಾರ್ಟಿನ್’ ಚಿತ್ರ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು, ಅದೇ ಕಾರಣಕ್ಕೆ ಚಿತ್ರದ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದರು.
Sacnilk ವರದಿ ಪ್ರಕಾರ, ಮೂರು ದಿನಗಳಲ್ಲಿ ‘ಮಾರ್ಟಿನ್’ ಸುಮಾರು 16 ಕೋಟಿ ರೂ. ಗಳಿಸಿದೆ. ಮೊದಲ ದಿನ 6.7 ಕೋಟಿ, ಎರಡನೇ ದಿನ 5.5 ಕೋಟಿ, ಮೂರನೇ ದಿನ ನಾಲ್ಕು ಕೋಟಿ ರೂ. ಗಳಿಸಿದ್ದು, ಈ ಮೂಲಕ ಒಟ್ಟಾರೆ 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಜೆಟ್ 100 ಕೋಟಿ ದಾಟಿದ ಹಿನ್ನೆಲೆಯಲ್ಲಿ ಕಲೆಕ್ಷನ್ ಕೆಲವರಿಗೆ ಕಡಿಮೆ ಎನಿಸಿದರೂ, ಅಭಿಮಾನಿಗಳು ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
