BBK 11ಮೊದಲ ವಾರವೇ ಯಾರಿಗೆ ಗೇಟ್ ಪಾಸ್ ದೊಡ್ಮನೆಯಲ್ಲಿ ನಾಮಿನೇಷನ್ ಕಿಡಿ
ಪ್ರೇಕ್ಷಕರು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ 11ರ ಪ್ರಾರಂಭವು ಅದ್ಧೂರಿಯಾಗಿ ಜರುಗಿದೆ. 17 ಸ್ಪರ್ಧಿಗಳ ನಡುವೆ ಈಗಾಗಲೇ ಪೈಪೋಟಿ ಆರಂಭವಾಗಿದ್ದು, ಮೊದಲ ವಾರದಲ್ಲೇ ನಾಮಿನೇಷನ್ ಕಿಡಿ ಹೊತ್ತಿಕೊಂಡಿದೆ.
ಸಿನಿಮಾ, ಸೀರಿಯಲ್, ರಂಗಭೂಮಿ, ಮತ್ತು ಸೋಶಿಯಲ್ ಮೀಡಿಯಾ ತಾರೆಯರು ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ಕೊಟ್ಟಿದ್ದು, ತಮ್ಮ ಕೌಶಲ್ಯ ತೋರಿಸಲು ಸಿದ್ಧರಾಗಿದ್ದಾರೆ. ಮೂರೇ ದಿನಗಳಲ್ಲಿ ಗೌತಮಿ ಜಾದವ್, ಶಿಶಿರ್, ಉಗ್ರಂ ಮಂಜು, ಯಮುನಾ, ಹಂಸ, ಭವ್ಯಾ, ಮೋಕ್ಷಿತಾ ಪೈ, ಮಾನಸಾ, ಚೈತ್ರಾ ಕುಂದಾಪುರ ಮೊದಲ ನಾಮಿನೇಷನ್‌ಗೆ ಸಿಲುಕಿದ್ದಾರೆ.
ಹೀಗಾಗಿ, ಈ ವಾರ ಯಾರಿಗೆ ಬಿಗ್ ಬಾಸ್ ಹೌಸ್‌ನಿಂದ ಗೇಟ್ ಪಾಸ್ ಸಿಗಲಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಮನೆ ಒಳಗಿಂದಾಗಲೇ ಚೈತ್ರಾ ಕುಂದಾಪುರ ಮತ್ತು ಯಮುನಾ ಸ್ಪರ್ಧಿಗಳಿಗೆ ಹೆಚ್ಚು ಗಮನ ಸೆಳೆಯುತ್ತಿದೆ. ಇನ್ನು ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಯಾವ ಸ್ಪರ್ಧಿಗೆ ಬಿಗ್ ಬಾಸ್ ಅಂತ್ಯವಾಗುತ್ತೆ ಎಂಬುದು ನೋಡಬೇಕು.