ಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ
ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇತ್ತೀಚೆಗಷ್ಟೆ ತಮ್ಮ ಮೊದಲ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ. ನಟ ಕೃಷ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಂಭ್ರಮದ ಕ್ಷಣವನ್ನು ಶೇರ್ ಮಾಡಿದ್ದು, ತಮ್ಮ ಮಗಳ ಹೆಸರು "ಪರಿ" ಎಂದು ಘೋಷಿಸಿದ್ದಾರೆ.
ವಿಡಿಯೋದಲ್ಲಿ, ಮಗುವನ್ನು ಕೈಯಲ್ಲಿ ಎತ್ತಿಕೊಂಡು ಪತ್ನಿ ಮಿಲನಾಳೊಂದಿಗೆ ಮನೆಗೆ ಪ್ರವೇಶಿಸುತ್ತಿರುವ ದೃಶ್ಯ ಮುದ್ದಾಗಿ ಮೂಡಿದೆ. ಬಲೂನ್‌ಗಳಿಂದ ಅಲಂಕೃತ ಮನೆ, ಕೇಕ್ ಕಟ್ ಮಾಡುವುದು, ಮತ್ತು ಪರಿ ಎಂಬ ನಾಮಫಲಕ ಎಲ್ಲವೂ ಈ ಸಮಾರಂಭದ ವೈಶಿಷ್ಟ್ಯವನ್ನು ಹೆಚ್ಚಿಸಿದೆ.
ಅಭಿಮಾನಿಗಳು ಮತ್ತು ಸ್ನೇಹಿತರು ಪರಿಗೆ ಶುಭ ಹಾರೈಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.