Back to Top

ದಸರಾ ಆನೆಗಳ ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ

SSTV Profile Logo SStv October 1, 2024
ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ
ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ
ದಸರಾ ಆನೆಗಳ ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ ನಟ ಡಾಲಿ ಧನಂಜಯ ಸದ್ಯ ಮೈಸೂರಿನಲ್ಲಿ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣದ ನಡುವೆಯೂ ದಸರಾ ಸಂಭ್ರಮದಲ್ಲಿ ಭಾಗಿ ಆಗಿರುವ ಮಾವುತರಿಗೆ ಲಿಡ್ಕರ್ ಚಪ್ಪಲಿಗಳನ್ನ ನೀಡಿದ್ದಾರೆ. ಧನಂಜಯ ಲಿಡ್ಕರ್‌ನ ರಾಯಭಾರಿಯಾಗಿದ್ದು, ಅದೇ ಕಾರಣದಿಂದ ಈ ಬಾರಿ ಮಾವುತರಿಗೆ ಚಪ್ಪಲಿ ಉಡಗೊರೆಯಾಗಿ ನೀಡಿದ್ದಾರೆ. ಇದೇ ಸಮಯದಲ್ಲಿ ನಟ ಡಾಲಿ ಆನೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ಕಾಲ ಮಾವುತರು ಹಾಗೂ ಅರಣ್ಯ ಅಧಿಕಾರಿಗಳ ಬಳಿ ಆನೆಯ ಬಗ್ಗೆ ಕುತೂಹಲಕಾರಿ ವಿಚಾರಗಳನ್ನ ಕೇಳಿ ತಿಳಿದುಕೊಂಡಿದ್ದಾರೆ. ತನ್ನದೇ ಹೆಸರಿನ ಆನೆಯನ್ನ ಕಂಡು ಧನಂಜಯ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಡಾಲಿ ಅರಸಿಕೆರೆ ಮೂಲದವರಾಗಿದರು ಕೂಡ ಮೈಸೂರಿನ ನಂಟನ್ನು ಹೆಚ್ಚಾಗಿ ಬೆಳಸಿಕೊಂಡಿದ್ದಾರೆ.