Back to Top

ಮಾರ್ಟಿನ್ ಸಕ್ಸಸ್ ಮೀಟ್ ಅಕ್ಟೋಬರ್ 14ರಂದು ಬೆಂಗಳೂರು ಜಿಟಿ ಮಾಲ್‌ನಲ್ಲಿ

SSTV Profile Logo SStv October 14, 2024
ಮಾರ್ಟಿನ್ ಸಕ್ಸಸ್ ಮೀಟ್
ಮಾರ್ಟಿನ್ ಸಕ್ಸಸ್ ಮೀಟ್
ಮಾರ್ಟಿನ್ ಸಕ್ಸಸ್ ಮೀಟ್ ಅಕ್ಟೋಬರ್ 14ರಂದು ಬೆಂಗಳೂರು ಜಿಟಿ ಮಾಲ್‌ನಲ್ಲಿ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾದ ತಂಡವು ಸೋಮವಾರ, ಅಕ್ಟೋಬರ್ 14ರಂದು ಬೆಂಗಳೂರಿನ ಜಿಟಿ ಮಾಲ್‌ ನಲ್ಲಿ ಇರುವ ಎಂಎಂಬಿ ಲೆಗಸಿಯಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಪಾಲ್ಗೊಳ್ಳುವ ಸಾಧ್ಯತೆ ಇದೆ. 'ಮಾರ್ಟಿನ್' ಸಿನಿಮಾ ದಸರಾ ಸಂದರ್ಭದಲ್ಲಿ ಅಕ್ಟೋಬರ್ 11ರಂದು ಬಿಡುಗಡೆಗೊಂಡಿದ್ದು, ಮೊದಲ ಮೂರು ದಿನಗಳಲ್ಲಿ 16 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವಾಗಿರುವ 'ಮಾರ್ಟಿನ್'ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ, ಧ್ರುವ ಸರ್ಜಾ ಅಭಿಮಾನಿಗಳು ಇದನ್ನು ಬೆಂಬಲಿಸುತ್ತಿದ್ದಾರೆ.