Back to Top

ಬಿಗ್‌ಬಾಸ್ 11 ಸ್ಪರ್ಧಿ ಧನರಾಜ್ – ಈ ಬಾರಿ ರಿಯಾಲಿಟಿ ಶೋ ಅಲ್ಲ, ಮಗಳ ಹುಟ್ಟುಹಬ್ಬದಿಂದ ಸುದ್ದಿಯಲ್ಲಿ

SSTV Profile Logo SStv August 23, 2025
ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ

ಕನ್ನಡದ ಬಿಗ್‌ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಹೆಸರು ಮಾಡಿದ ಧನರಾಜ್ ಆಚಾರ್ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಸಖತ್ ಖುಷಿಯ ಕ್ಷಣವನ್ನು ಆಚರಿಸಿದ್ದಾರೆ. ಅವರ ಮುದ್ದಾದ ಮಗಳು ಪ್ರಸಿದ್ಧಿ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಿಕೊಡಲಾಗಿದೆ.

ಹುಟ್ಟುಹಬ್ಬದ ಸಮಾರಂಭಕ್ಕೆ ಚೈತ್ರಾ ಕುಂದಾಪುರ ದಂಪತಿಗಳು ಕೂಡ ಹಾಜರಾಗಿದ್ದರು. ವೇದಿಕೆಯಲ್ಲಿ ನಿಂತುಕೊಂಡು ಪ್ರಸಿದ್ಧಿಯಿಂದ ಕೇಕ್ ಕಟ್ ಮಾಡಿಸಿ ಎಲ್ಲರ ಗಮನ ಸೆಳೆದರು.

ಬಿಗ್‌ಬಾಸ್ ಮನೆಯಲ್ಲಿ “ಗಿಚ್ಚಿ ಗಿಲಿಗಿಲಿ” ಅಂದೇ ಜನಪ್ರಿಯರಾದ ಧನರಾಜ್, ತಮ್ಮ ಹಾಸ್ಯ, ಮಾತು, ಮನರಂಜನೆಯಿಂದ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈಗ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.