Back to Top

ಲವ್ ಲೈಫ್ ವಿಚಾರ ಬಿಚ್ಚಿಟ್ಟ ನಟಿ ಶ್ರೀಲೀಲಾ ಇಲ್ಲಿದೆ ವಿವರ

SSTV Profile Logo SStv September 25, 2024
ಲವ್ ಲೈಫ್ ವಿಚಾರ ಬಿಚ್ಚಿಟ್ಟ ಶ್ರೀಲೀಲಾ
ಲವ್ ಲೈಫ್ ವಿಚಾರ ಬಿಚ್ಚಿಟ್ಟ ಶ್ರೀಲೀಲಾ
ಲವ್ ಲೈಫ್ ವಿಚಾರ ಬಿಚ್ಚಿಟ್ಟ ನಟಿ ಶ್ರೀಲೀಲಾ ಇಲ್ಲಿದೆ ವಿವರ ನಟಿ ಶ್ರೀಲೀಲಾ ಲವ್ ಲೈಫ್ ಕುರಿತಂತೆ ಬಹಿರಂಗವಾಗಿ ಮಾತನಾಡಿದ್ದಾರೆ. 23 ವರ್ಷ ವಯಸ್ಸಿನ ಶ್ರೀಲೀಲಾ, ಪ್ರಸ್ತುತ ಯಾವುದೇ ಪ್ರೀತಿ ಸಂಬಂಧಗಳಲ್ಲಿಲ್ಲ ಎಂದು ತಿಳಿಸಿದ್ದಾರೆ. ಅವರು ತಮ್ಮ ಒಲವುಗಳು ಓದು ಮತ್ತು ನಟನೆಯತ್ತ ಮಾತ್ರ ಸೀಮಿತವಾಗಿವೆ ಎಂದು ಹೇಳಿದ್ದು, ತಮ್ಮ ಶಿಕ್ಷಣ ಪೂರ್ಣಗೊಳ್ಳುವವರೆಗೆ ಪ್ರೀತಿ ಅಥವಾ ಮದುವೆಯ ಬಗ್ಗೆ ಯೋಚನೆಯಿಲ್ಲ ಎಂದಿದ್ದಾರೆ. ಶ್ರೀಲೀಲಾ ಅವರು ಎಂಬಿಬಿಎಸ್ ಮಾಡುವ ಜೊತೆಗೆ, ಭವಿಷ್ಯದಲ್ಲಿ ಎಂಎಸ್ ಮಾಡಲು ಕನಸು ಇಟ್ಟುಕೊಂಡಿದ್ದಾರೆ. ಇನ್ನು ಹಲವರು ತಡವಯಸ್ಸಿನಲ್ಲಿ ಮದುವೆ ಆಗುತ್ತಿರುವ ಹೀರೋಯಿನ್ ಗಳ ಸಾಲಿಗೆ ಶ್ರೀಲೀಲಾ ಕೂಡ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅವರು 2017ರಲ್ಲಿ ಕನ್ನಡ ಚಿತ್ರ ‘ಚಿತ್ರಾಂಗದ’ ನಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದರು. ‘ಕಿಸ್’ ಮತ್ತು ‘ಭರಾಟೆ’ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತರಾದ ಶ್ರೀಲೀಲಾ, ಈಗ ತೆಲುಗು ಚಿತ್ರರಂಗದಲ್ಲೂ ಯಶಸ್ಸು ಕಾಣುತ್ತಿದ್ದಾರೆ.