Back to Top

ಬಿಗ್ ಬಾಸ್ 11 ಲಾಯರ್ ಜಗದೀಶ್ ಅವರ ಡ್ರಾಮಾ ಮನೆ ಮಂದಿಗೆ ತೊಂದರೆ

SSTV Profile Logo SStv October 3, 2024
ಲಾಯರ್ ಜಗದೀಶ್ ಅವರ ಡ್ರಾಮಾ
ಲಾಯರ್ ಜಗದೀಶ್ ಅವರ ಡ್ರಾಮಾ
ಬಿಗ್ ಬಾಸ್ 11 ಲಾಯರ್ ಜಗದೀಶ್ ಅವರ ಡ್ರಾಮಾ ಮನೆ ಮಂದಿಗೆ ತೊಂದರೆ ಬಿಗ್ ಬಾಸ್ 11ನಲ್ಲಿ ಲಾಯರ್ ಜಗದೀಶ್ ವರ್ತನೆಯಿಂದ ಮನೆ ಮಂದಿ ತತ್ತರಿಸಿದ್ದಾರೆ. ಅವರು ಹುಚ್ಚ ವೆಂಕಟ್ ಮಾದರಿಯಂತೆ ಬಿಹೇವ್ ಮಾಡುತ್ತಿದ್ದು, "ನಾನು ಮನೆಯಿಂದ ಹೊರಗೆ ಹೋಗುತ್ತೇನೆ" ಎಂದು ಗುಡುಗಿದ್ದಾರೆ. ಜಗದೀಶ್ ಮನೆಯಲ್ಲಿ ತಾನು ಬಿಗ್ ಬಾಸ್‌ನ್ನು ಎಕ್ಸ್‌ಪೋಸ್ ಮಾಡುತ್ತೇನೆ ಎಂಬ ತೀವ್ರ ಮಾತುಗಳನ್ನಾಡಿ, ಎಲ್ಲರನ್ನು ಆಶ್ಚರ್ಯಕ್ಕೊಳಪಡಿಸಿದ್ದಾರೆ. ಸ್ಪರ್ಧಿಗಳ ಜೊತೆ ಕಿತ್ತಾಡುತ್ತಿರುವ ಜಗದೀಶ್, ಅವರ ವರ್ತನೆಯಿಂದ ನಟಿ ಹಂಸ ಭಾವುಕವಾಗಿದ್ದು, ಅತ್ತಿದ್ದಾರೆ. ಇಡೀ ಮನೆ ಸದಸ್ಯರು ಜಗದೀಶ್ ಅವರನ್ನು ನಾಮಿನೇಟ್ ಮಾಡಿದ್ದಾರೆ, ಇದರಿಂದ ಈ ವಾರವೇ ಅವರು ಮನೆಯಿಂದ ಹೊರಗೆ ಹೋಗಬಹುದು ಎಂಬ ಅನುಮಾನ ಹೆಚ್ಚಿದೆ.