Back to Top

ಬಿಗ್ ಬಾಸ್ ಮನೆಯಿಂದ ಹೊರಬಂದು ಕ್ಷಮೆ ಕೇಳಿದ ಜಗದೀಶ್

SSTV Profile Logo SStv October 18, 2024
ಕ್ಷಮೆ ಕೇಳಿದ ಜಗದೀಶ್
ಕ್ಷಮೆ ಕೇಳಿದ ಜಗದೀಶ್
ಬಿಗ್ ಬಾಸ್ ಮನೆಯಿಂದ ಹೊರಬಂದು ಕ್ಷಮೆ ಕೇಳಿದ ಜಗದೀಶ್ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಲಾಯರ್ ಜಗದೀಶ್ ಎಲಿಮಿನೇಟ್ ಆಗಿದ್ದಾರೆ. ಮನೆಯಲ್ಲಿ ಅಶಿಸ್ತು ತೋರಿದ್ದು, ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತು ಆಡಿದ್ದಕ್ಕೆ ಅವರನ್ನು ಹೊರಕ್ಕೆ ಕಳಿಸಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ. ಜಗದೀಶ್ ತಮ್ಮ ಸಂದೇಶದಲ್ಲಿ, ಸುದೀಪ್, ರಂಜಿತ್, ಮಾನಸ ಮತ್ತು ಇತರ ಸ್ಪರ್ಧಿಗಳ ಬಳಿ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. "ನನ್ನಿಂದ ಕೆಲವು ತಪ್ಪುಗಳು ನಡೆದಿವೆ, ನಾಟಕ ಅಥವಾ ಮನರಂಜನೆಯ ಭಾಗವಷ್ಟೇ" ಎಂದು ಅವರು ಹೇಳಿದ್ದಾರೆ. ಆದರೆ, ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಶಂಸಿಸಿರುವ ಜಗದೀಶ್, ಭಾನುವಾರ ಜಕ್ಕೂರು ಏರೋಸ್ಪೇಸ್‌ನಲ್ಲಿ ಸುದ್ದಿಗೋಷ್ಠಿ ನಡೆಸುವ ಯೋಜನೆ ಹೊಂದಿದ್ದಾರೆ.