Back to Top

ಫ್ಯಾಮಿಲಿ ಜೊತೆ ಮನೆಯಲ್ಲೇ ಕೂತು ನೋಡಿ ಕೃಷ್ಣಂ ಪ್ರಣಯ ಸಖಿ! ಈ ದಿನ ಒಟಿಟಿಗೆ ಬರ್ತಿದೆ!

SSTV Profile Logo SStv September 25, 2024
ಕೃಷ್ಣಂ ಪ್ರಣಯ ಸಖಿ  ಒಟಿಟಿ
ಕೃಷ್ಣಂ ಪ್ರಣಯ ಸಖಿ ಒಟಿಟಿ
ಫ್ಯಾಮಿಲಿ ಜೊತೆ ಮನೆಯಲ್ಲೇ ಕೂತು ನೋಡಿ ಕೃಷ್ಣಂ ಪ್ರಣಯ ಸಖಿ! ಈ ದಿನ ಒಟಿಟಿಗೆ ಬರ್ತಿದೆ! ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ತೆರೆಯ ಮೇಲೆ ಯಶಸ್ಸು ಕಂಡು, 20 ಕೋಟಿ ರೂ. ಗಡಿ ದಾಟಿದೆ. ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ಅಭಿನಯಿಸಿದ್ದಾರೆ. ಸಿನಿಮಾ ಒಟಿಟಿ ಬಿಡುಗಡೆಯ ಬಗ್ಗೆ ಚರ್ಚೆಗಳು ಜೋರಾಗಿದ್ದು, ಅಮೇಜಾನ್ ಪ್ರೈಂ ಸಿನಿಮಾ ಹಕ್ಕುಗಳನ್ನು ಕೊಂಡುಕೊಂಡಿದೆ ಎಂಬ ಸುದ್ದಿ ಬಂದಿದೆ. ಅಕ್ಟೋಬರ್ 11ಕ್ಕೆ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ, ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಈ ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.