‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್
ಬಹುನಿರೀಕ್ಷಿತ "ಕೊರಗಜ್ಜ" ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ. ಸಿನೆಮಾದ ಗುಣಮಟ್ಟ ಹಾಗೂ ತಾಂತ್ರಿಕತೆಯಿಂದ ಪ್ರಭಾವಿತರಾಗಿ, ತ್ರಿವಿಕ್ರಮ ಅವರು ಸುಧೀರ್ ಅತ್ತಾವರ್ ಅವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸುಧೀರ್ ಅತ್ತಾವರ್ ಈ ಚಿತ್ರಕ್ಕೆ ಅಷ್ಟೊಂದು ತಾಂತ್ರಿಕ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ತೋರಿದ್ದು, ಚಿತ್ರವು 800 ವರ್ಷಗಳ ಹಿಂದಿನ ಆದಿವಾಸಿ ಪಾತ್ರ 'ತನಿಯಾ'ನ ಕಥೆಯನ್ನು ಆಧರಿಸಿದೆ. ಕಬೀರ್ ಬೇಡಿ ಸೇರಿದಂತೆ ಹಲವು ಕಲಾವಿದರೊಂದಿಗೆ, ಚಿತ್ರದಲ್ಲಿ ಬೃಹತ್ ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.
ಚಿತ್ರದ ವಿಶಿಷ್ಟ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಭರವಸೆಯಿಂದ ಮೂಡಿ ಬಂದಿರುವ "ಕೊರಗಜ್ಜ" ಭಾರತೀಯ ಚಿತ್ರರಂಗದಲ್ಲಿ ಹೊಸ ಜೋನರ್ ಸೃಷ್ಟಿಸುತ್ತಿದೆ.