ಮಂಗಳೂರು ಕೊರಗಜ್ಜ ಕ್ಷೇತ್ರಕ್ಕೆ ಶಿವರಾಜ್‌ಕುಮಾರ್ ದಂಪತಿ ಭೇಟಿ ನಟ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಅವರು ಮಂಗಳೂರಿನ ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆಗ, ಶಿವಣ್ಣ ಕೊರಗಜ್ಜ ದೈವದ ಮಹತ್ವದ ಬಗ್ಗೆ ಮಾತನಾಡಿ, "ಈ ದೈವದ ಮೇಲೆ ಅಪಾರ ನಂಬಿಕೆ ಇದೆ, ಇಲ್ಲಿಗೆ ಬಂದಾಗ ಮನಸ್ಸಿಗೆ ಶಾಂತಿ ಸಿಗುತ್ತದೆ," ಎಂದರು.
ಇದೀಗ ಶಿವಣ್ಣ ಅವರ ಕೈಯಲ್ಲಿರುವ ಪ್ರಮುಖ ಸಿನಿಮಾದಲ್ಲಿ 'ಭೈರತಿ ರಣಗಲ್', 'ಉತ್ತರಾಕಾಂಡ', ಮತ್ತು ರಾಮ್ ಚರಣ್ ಜೊತೆಯ ತೆಲುಗು ಸಿನಿಮಾ ಸೇರಿವೆ.