Back to Top

ಕೋಡೈಕೆನಾಲ್‌ ಸೌಂದರ್ಯ ಸವಿಯುತ್ತಿರುವ ಮೋಕ್ಷಿತಾ ಪೈ – ಫೋಟೋಸ್ ವೈರಲ್!

SSTV Profile Logo SStv June 24, 2025
ಕೋಡೈಕೆನಾಲ್‌ ಸೌಂದರ್ಯ ಸವಿಯುತ್ತಿರುವ ಮೋಕ್ಷಿತಾ ಪೈ
ಕೋಡೈಕೆನಾಲ್‌ ಸೌಂದರ್ಯ ಸವಿಯುತ್ತಿರುವ ಮೋಕ್ಷಿತಾ ಪೈ

ಕನ್ನಡ ಕಿರುತೆರೆ ಲೋಕದ ಪ್ರಖ್ಯಾತ ನಟಿ ಮೋಕ್ಷಿತಾ ಪೈ, 'ಪಾರು' ಧಾರಾವಾಹಿಯ ಮೂಲಕ ಮನೆಮಾತಾಗಿದ್ದು, ನಂತರ 'ಬಿಗ್ ಬಾಸ್ ಸೀಸನ್ 11' ನಲ್ಲಿ ಸ್ಪರ್ಧಿಯಾಗಿ ಮತ್ತಷ್ಟು ಜನಪ್ರಿಯರಾಗಿದ್ದರು. ತೀವ್ರ ಸ್ಪರ್ಧೆ ಇರುವ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮೋಕ್ಷಿತಾ ಯಾವುದೇ ಧಾರಾವಾಹಿ ಅಥವಾ ಸಿನಿಮಾದ ಪ್ರಾಜೆಕ್ಟ್‌ ತೆಗೆದುಕೊಳ್ಳದೇ, ದೇಶ-ವಿದೇಶಗಳಲ್ಲಿ ತಿರುಗಾಟದ ಮೂಲಕ ತಮ್ಮ ವೈಯಕ್ತಿಕ ಜೀವನವನ್ನ ಆನಂದಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ತಮಿಳುನಾಡಿನ ಸುಂದರ ಹಿಲ್ಸ್ಟೇಷನ್ ಕೊಡೈಕೆನಾಲ್‌ಗೆ ಭೇಟಿ ನೀಡಿದ ಮೋಕ್ಷಿತಾ, ಅಲ್ಲಿ ಕ್ಯಾಮೆರಾದ ಮುಂದೆ ತಮ್ಮ ಅನನ್ಯ ಆಕರ್ಷಕ ಶೈಲಿಯಲ್ಲಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ನೈಸರ್ಗಿಕ ಸೌಂದರ್ಯದ ನಡುವೆ ಶಾಂತ ಮನಸ್ಥಿತಿ ಅನುಭವಿಸುತ್ತಿರುವ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೋಕ್ಷಿತಾ, ಅಭಿಮಾನಿಗಳೊಂದಿಗೆ ತಮ್ಮ ಜೀವನದ ಅನೇಕ ಆಪ್ತ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಹವ್ಯಾಸಗಳ ಬಗ್ಗೆ ಪೋಟೋಗಳ ಮೂಲಕ ನಿಯಮಿತವಾಗಿ ಅಪ್ಡೇಟ್ ಕೊಡುತ್ತಿರುವ ಮೋಕ್ಷಿತಾ, ಬಿಗ್ ಬಾಸ್ ನಂತರವೂ ಅವರ ಕ್ರೇಜ್‌ನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.