Back to Top

ನಾನು ಬಿಗ್‌ ಬಾಸ್‌ಗೆ ಹೋಗುತ್ತಿಲ್ಲ ಕಿರಣ್‌ ರಾಜ್‌ ಸ್ಪಷ್ಟನೆ

SSTV Profile Logo SStv September 28, 2024
ಕಿರಣ್‌ ರಾಜ್‌ ಸ್ಪಷ್ಟನೆ
ಕಿರಣ್‌ ರಾಜ್‌ ಸ್ಪಷ್ಟನೆ
BBK 11: ನಾನು ಬಿಗ್‌ ಬಾಸ್‌ಗೆ ಹೋಗುತ್ತಿಲ್ಲ- ಕಿರಣ್‌ ರಾಜ್‌ ಸ್ಪಷ್ಟನೆ ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶುರುವಿಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ರಂದು ಬಿಗ್ ಬಾಸ್ ಶೋಗೆ ಅದ್ಧೂರಿ ಚಾಲನೆ ಸಿಗಲಿದೆ. ಇನ್ನೂ ದೊಡ್ಮನೆ ಆಟಕ್ಕೆ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ (Kiran Raj) ಎಂಟ್ರಿ ಕೊಡುವ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಇದೀಗ ಹರಿದಾಡುತ್ತಿರುವ ಸುದ್ದಿಗೆ ನಟ ಕ್ಲ್ಯಾರಿಟಿ ನೀಡಿದ್ದಾರೆ. ಕಿರಣ್ ರಾಜ್ ಈ ಬಾರಿ ಬಿಗ್ ಬಾಸ್ (Bigg Boss Kannada 11) ಹೋಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಯಾವುದಕ್ಕೂ ಸ್ಪಷ್ಟನೆ ಇರಲಿಲ್ಲ. ಇದೀಗ ‘ರಾನಿ’ ಸಿನಿಮಾಗೆ ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು. ನಾನು ಬಿಗ್ ಬಾಸ್‌ಗೆ ಹೋಗುತ್ತಿಲ್ಲ. ಇದೆಲ್ಲಾ ರೂಮರ್ಸ್ ಎಂದು ನಟ ಸ್ಪಷ್ಟನೆ ನೀಡಿದ್ದಾರೆ.ಅಂದಹಾಗೆ, ಇಂದಿನ ‘ರಾಜ ರಾಣಿ’ ಶೋನಲ್ಲಿ ಸಂಜೆ 6 ಗಂಟೆ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ. ಈ ಶೋನಲ್ಲಿ 5 ಬಿಗ್ ಬಾಸ್ ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ. ಕಾರ್ಯಕ್ರಮ ಆರಂಭಕ್ಕೂ ಮುಂಚೆಯೇ ಆ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಇದೇ ಮೊದಲ ಬಾರಿ ಆಗಿದೆ.